ಬೆಂಗಳೂರು : ತೊಗರಿ ಬೇಳೆಯಲ್ಲೂ ರಾಸಾಯನಿಕ ಬಣ್ಣಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಈ ಕೇಸರಿ ಬೇಳೆ ಸೇವನೆಯಿಂದ ಲ್ಯಾಥರಿಸಂಎಂಬ ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ, ಕ್ಯಾನ್ಸರ್ ಉಂಟಾಗುವ ಸಾಧ್ಯತೆಯಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹೌದು, ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶ ಹಾಗೂ ಉತ್ತರ ಭಾರತದ ಕೆಲಕಡೆ ಹೇರಳವಾಗಿ ಬೆಳೆವ ಕೇಸರಿ ಬೇಳೆಯನ್ನು ನಾಟಿ ಬೇಳೆ ಎಂದು ಅಗ್ಗದ ಬೆಲೆಗೆ ಮಾರಲಾಗುತ್ತಿದೆ. ಜತೆಗೆ ತೊಗರಿ ಬೇಳೆಯಲ್ಲೂ ಬೆರೆಸಲಾಗುತ್ತಿದೆ. ಈ ವೇಳೆ ಅಸಲಿ ಬೇಳೆಗೂ, ಕಲಬೆರಕೆ ಬೇಳೆಗೂ ಇರುವ ವ್ಯತ್ಯಾಸ ಗೊತ್ತಾಗದಂತೆ ಕೇಸರಿ ಬೇಳೆಗೆ ಹಳದಿ ಬಣ್ಣ ಬರುವಂತೆ ಟಾಟ್ರಾಜಿನ್ (ಇ-102) ಬಣ್ಣ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ, ಉತ್ತರ ಭಾರತದ ಕೆಲ ವೆಡೆ ಹೇರಳವಾಗಿ ಕೇಸರಿ ಬೆಳೆಯನ್ನು ಮಾರಾಟ ಮಾಡಲಾಗುತ್ತದೆ. ಬಣ್ಣ, ಆಕಾರದಲ್ಲಿ ತೊಗರಿ ಬೇಳೆ ಯನ್ನೇ ಹೋಲುತ್ತಿದ್ದರೂ ಅದು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ವ್ಯತ್ಯಾಸ ಗೊತ್ತಾಗದಿರಲಿ ಎಂದು ಕೇಸರಿ ಬೇಳೆ ಹಳದಿ ಬಣ್ಣ ಬೆರೆಸಿ ತೊಗರಿ ಜತೆ ಮಿಶ್ರಣ. ಇದರಿಂದ ಲ್ಯಾಥರಿಸಂ ಕಾಯಿಲೆ ಬರಬಹುದು ಎಂದು ಆಧಿಕಾರಿಗಳು ಎಚ್ಚರಿಸಿದ್ದಾರೆ.