ಬೆಳಗಾವಿ: ಪಾಲಿಕೆ ಗದ್ದುಗೆ ಬಿಜೆಪಿ ಪಾಲಾಗಿದೆ. ಸತತ ಮೂರನೇ ಬಾರಿಗೆ ಮೇಯರ್ ಆಗಿ ಮಂಗೇಶ್, ಉಪ ಮೇಯರ್ ಆಗಿ ವೀಣಾ ಆಯ್ಕೆಯಾಗಿದ್ದಾರೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ಗೆ ಭಾರೀ ಮುಖಭಂಗವೇ ಉಂಟಾಗಿದೆ.
ಇಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಿತು. ಈ ವೇಳೆಯಲ್ಲಿ ಚುನಾವಣಾಧಿಕಾರಿಗಳು ಕೈ ಎತ್ತುವ ಮೂಲಕ ಮತ ಚಲಾಯಿಸುವುದಕ್ಕೆ ಅವಕಾಶವನ್ನು ನೀಡಿದರು.
ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದಂತ ಮಂಗೇಶ್ ಪರವಾಗಿ 40 ಮತಗಳು ಚಲಾವಣೆಗೊಂಡರೇ, ವಿರುದ್ಧವಾಗಿ ಐದು ಮತ ಚಲಾಯಿಸಲ್ಪಟ್ಟಿತು. ಇನ್ನೂ ಉಪ ಮೇಯರ್ ಚುನಾವಣೆಯಲ್ಲಿ ವೀಣಾ ಅವರಿಗೆ 40 ಮತ ಪರವಾಗಿ ಬಿದ್ದರೇ, 19 ಮತಗಳು ವಿರುದ್ಧವಾಗಿ ಬಿದ್ದಿದ್ದವು. ಆ ಮೂಲಕ ಮೇಯರ್ ಆಗಿ ಬಿಜೆಪಿಯ ಮಂಗೇಶ್, ಉಪ ಮೇಯರ್ ಆಗಿ ವೀಣಾ ಆಯ್ಕೆಯಾಗಿದ್ದಾರೆ.
ಕಾಡಾನೆ ದಾಳಿಗೆ ಮಹಿಳೆ ಸಾವು ಹಿನ್ನೆಲೆ: ತುರ್ತು ಸಭೆ ನಡೆಸಿ 3 ಆನೆ ಸೆರೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!