ಆಂಧ್ರಪ್ರದೇಶ : ಇಬ್ಬರು ಮಕ್ಕಳು ಶಾಲೆಯ ಫೀಸ್ ಕಟ್ಟೋಕೆ ಆಗದೆ ಪಾಪಿ ತಂದೆಯೊಬ್ಬ, ಮಕ್ಕಳಿಬ್ಬರನ್ನು ಕೊಂದು ಬಳಿಕ ಡೆತ್ ನೋಟ್ ಬರೆದಿಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಡೆದಿದೆ.
ಮಕ್ಕಳದ ಜೋಶಿಲ್ ಹಾಗು ನಿಖಿಲನ್ನು ಪಾಪಿ ತಂದೆ ಚಂದ್ರಕಿಶೋರ್ ಕೊಲೆ ಮಾಡಿದ್ದಾನೆ. ಕಳೆದ ವರ್ಷ ಇಬ್ಬರೂ ಮಕ್ಕಳಿಗೆ ಎರಡು ಲಕ್ಷ ಫೀಸ್ ಕಟ್ಟಿದ್ದರು. ಈ ವರ್ಷ ಫೀಸ್ ಕಟ್ಟಲು ಆಗದೆ ಚಂದ್ರಕಿಶೋರ್ ಒದ್ದಾಡಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ದಿನಾಲು ಗಲಾಟೆ ನಡಿತಾ ಇತ್ತು. ಇದೇ ಕೋಪಕ್ಕೆ ಮಕ್ಕಳನ್ನು ತಂದೆ ಚಂದ್ರಕಿಶೋರ್ ಕೊಲೆಗೈದಿದ್ದಾನೆ.
ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಡೆತ್ ನೋಟ್ ಬರೆದಿದ್ದಾನೆ. ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಕ್ಕಾಗದೆ ಹೇಯ ಕೃತ್ಯ ನಡೆದಿದೆ. ಮಕ್ಕಳ ಕೈ ಮತ್ತು ಕಾಲು ಕಟ್ಟಿ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಪತ್ನಿಗೆ ಮಕ್ಕಳಿಗೆ ಸಮವಸ್ತ್ರ ಹೊಲಿಸಲು ಟೇಲರ್ ಬಳಿ ಕರೆದುಕೊಂಡು ಹೋಗುತೇನೆ. ನೀನು ಇಲ್ಲಿಯೇ ಇರು ಎಂದು ಹೇಳಿ ಪತ್ನಿಯನ್ನು ಕಚೇರಿಯಲ್ಲಿ ಕೂರಿಸಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಬಳಿಕ ಮಕ್ಕಳ ಕೈ-ಕಾಲು ಕಟ್ಟಿಹಾಕಿ, ತಲೆಯನ್ನು ನೀರು ತುಂಬಿದ ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಎಷ್ಟುಹೊತ್ತಾದರೂ ಬಾರದಿದ್ದಾಗಿ ಪತ್ನಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದು ನೋಡಿದಗಾ ಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವುದನ್ನು ಕಂಡು ಕಂಗಾಲಾಗಿದ್ದಾಳೆ.ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.