ಗದಗ : ಹೋಳಿ ಹಬ್ಬದ ಅಂಗವಾಗಿ ಇಂದು ಎಲ್ಲೆಡೆ ಬಣ್ಣ ರಚೋ ಮೂಲಕ ಯುವಜನತೆ ಬಣ್ಣದಲ್ಲಿ ಮಿಂದೆದ್ದಿದೆ. ಹೋಳಿ ಹಬ್ಬದ ಲ್ಲಿ ಆದಷ್ಟು ನೈಸರ್ಗಿಕ ಬಣ್ಣ ಬಳಸುವುದು ಉತ್ತಮ. ಆದರೆ ಗದಗದಲ್ಲಿ ಕಿಡಿಗೇಡಿಗಳು ಕೆಮಿಕಲ್ ಮೀಸರಿತ ಬಣ್ಣವನ್ನು ವಿದ್ಯಾರ್ಥಿಯ ನೆರ ಮೇಲೆ ಎರಚಿದ ಪರಿಣಾಮ ನಾಲ್ವರು ವಿದ್ಯಾರ್ಥಿಯರು ಅಸ್ವಸ್ಥರಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆದಿದೆ.
ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ ಪರಿಣಾಮ ಉಸಿರಾಟ ಸಮಸ್ಯೆ ಕಾಣಿಸ್ಕೊಂಡು ನಾಲ್ವರು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಕಿಡಿಗೇಡಿಗಳು ಕೆಮಿಕಲ್ ಬಣ್ಣ ಎರಚಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುವರ್ಣ ಗಿರಿ ತಾಂಡಾದಲ್ಲಿ ಈ ಒಂದು ಘಟನೆ ನಡೆದಿದೆ.
ಗೌರಿ ಪೂಜಾರ, ದಿವ್ಯಾ ಲಮಾಣಿ, ಅಂಕಿತಾ ಲಮಾಣಿ ಹಾಗೂ ತನುಷ ಅಸ್ವಸ್ಥರಾಗಿದ್ದಾರೆ. ಉಸಿರಾಟ ತೊಂದರೆ ಹಾಗೂ ಎದೆ ನೋವಿನಿಂದ ವಿದ್ಯಾರ್ಥಿನಿಯರು ನರಳುತ್ತಿದ್ದಾರೆ. ಗೌರಿ ಪೂಜಾರ, ಮತ್ತು ದಿವ್ಯಾ ಲಮಾಣಿಗೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಂಕಿತ ಮತ್ತು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಟ್ಟೆ, ಸಗಣಿ, ಮಣ್ಣು, ಗೊಬ್ಬರ ಕಲುಷಿತ ಬಣ್ಣ ಸೇರಿಸಿ ಶಾಲೆಗೆ ಹೋರಾಡಲು ಬಸ್ ಸ್ಟಾಪ್ ಅಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಗಳು ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಿದ್ದಾರೆ. ಈ ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಸಿರಾಟ ಹಾಗೂ ಎದೆ ನೋವು ಉಂಟಾಗಿದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.