ಬೆಂಗಳೂರು : ಹಳೆ ಪಿಂಚಣಿ ಜಾರಿ ಕುರಿತು ಇತ್ತೀಚಿಗೆ ಸರ್ಕಾರದ ವಿರುದ್ಧ ಹಲವು ಪ್ರತಿಭಟನೆ ನಡೆದಿದ್ದವು. ಈ ವಿಚಾರವಾಗಿ ತಡವಾಗಿಯಾದರೂ ಹಳೆ ಪಿಂಚಣಿ ಪದ್ದತಿ ಜಾರಿ ಖಚಿತ. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೆ ಬದ್ಧ. ಈ ಬಗ್ಗೆ ಅನುಮಾನವೇ ಬೇಡ. ತಡವಾದರೂ ಅದನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದರು.
ಕಾಂಗ್ರೆಸ್‌ನ ರಾಮೋಜಿಗೌಡ ಅವರ ಪ್ರಶ್ನೆಗೆ ಸಭಾನಾಯಕ ಎನ್. ಎಸ್.ಬೋಸರಾಜು ಅವರು ಉತ್ತರಿಸುವ ವೇಳೆ ಮಧ್ಯ ಪ್ರವೇಶಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ನೀಡಿದ ಭರವಸೆಗೆ ಬದ್ಧರಾಗಿದ್ದೇವೆ. ಒಪಿಎಸ್ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆ ಆಗಿದೆ. ಇಂದಲ್ಲ, ನಾಳೆ ಜಾರಿಗೆ ತರಲಾಗುವುದು ಎಂದರು.
ಸಭಾ ನಾಯಕ ಬೋಸರಾಜು ಒಪಿಎಸ್ ಜಾರಿ ಸಂಬಂಧ ಪರಿಶೀಲಿಸಲು ಸಮಿತಿ ರಚಿಸಲಾಗಿದೆ. 2 ಸಭೆಗಳೂ ನಡೆದಿವೆ. ಈ ಸಮಿತಿಗೆ ಡಿಫೈನ್ಸ್ ಪಿಂಚಣಿ ಯೋಜನೆ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಅಧ್ಯಯನ ನಡೆಸಿ ವರದಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.