ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟಿ ರನ್ಯಾ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ರನ್ಯಾ ರಾವ್ ಮನೆಯ ಮೇಲೆ ಇಡಿ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಆದರೆ ನಟಿ ರನ್ಯಾ ರಾವ್ ಪತಿಗು ಡಿ ಆರ್ ಐ ಶಾಕ್ ನೀಡಿದೆ. ಹೌದು ರನ್ಯಾ ಪತಿ ಜತಿನ್ ನಿವಾಸ ಸೇರಿದಂತೆ ಒಟ್ಟು 9 ಕಡೆ DRI ದಾಳಿ ನಡೆಸಿದೆ. ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿನ ಫ್ಲ್ಯಾಟ್ ಸೇರಿದಂತೆ 9 ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಲ್ಲದೇ ರನ್ಯಾ ರಾವ್ ವಿದೇಶಿ ಪ್ರಯಾಣಕ್ಕೆ ಫ್ಲೈಟ್ ಟಿಕೆಟ್ ಬುಕ್ ಮಾಡಲು ಜತಿನ್ ಕ್ರೆಡಿಟ್ ಕಾರ್ಡ್ ಬಳಸಿದ್ದ ಹಿನ್ನೆಲೆಯಲ್ಲಿ DRI ದಾಳಿ ನಡೆಸಿದೆ.