ಮೈಸೂರು : ಪತಿ ಹಾಗೂ ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರೇಷ್ಮಾ (25) ಎಂದು ತಿಳಿದುಬಂದಿದ್ದು, ಬರೀ ಶ್ರೀನಿವಾಸ್ ಹಿರೇ ವಿಚಾರವಾಗಿ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಆರು ವರ್ಷಗಳ ಹಿಂದೆ ಶ್ರೀನಿವಾಸ ಹಾಗೂ ರೇಷ್ಮಾ ಅವರ ಮದುವೆ ಆಗಿತ್ತು.
ಈರಯ್ಯನ ಕೊಪ್ಪಲು ನಿವಾಸಿ ಚಂದ್ರೇಗೌಡ, ಶಾಂತಮ್ಮ ದಂಪತಿಯ ಪುತ್ರಿ ರೇಷ್ಮಾ ಸಾವಿಗೆ ಪತಿ ಶ್ರೀನಿವಾಸ್ ಮತ್ತು ಆತನ ಸಹೋದರ ಶ್ರೀಧರ್, ಮಾವ ಮಾದೇಗೌಡ, ಅತ್ತೆ ಸರಸಮ್ಮ ಕಾರಣ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.