ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿತ್ತು. ಆದರೇ ಪ್ರತ್ಯೇಕ ತನಿಖೆಗೆ ಆದೇಶಿದ ಹಿನ್ನಲೆಯಲ್ಲಿ ಸಿಐಡಿಗೆ ವಹಿಸಿ ನೀಡಿದ್ದಂತ ಆದೇಶವನ್ನು ವಾಪಾಸ್ ಪಡೆಯಲಾಗಿದೆ.
ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣವನ್ನು ರಾಜ್ಯ ಸರ್ಕಾರ ಮೊದಲು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಆ ಬಳಿಕ ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೂ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿದ್ದಂತ ಆದೇಶವನ್ನು ಹಿಂಪಡೆಯಲಾಗಿದೆ.
ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ವಾಪಸ್ ಪಡೆದಿದೆ. ಸದ್ಯ ಸರ್ಕಾರದ ದಿಢೀರ್ ಯೂಟರ್ನ್ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು..? ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ.
ಶೀಘ್ರದಲ್ಲೇ ಬೆಂಬಲ ಬೆಲೆ ಯೋಜನೆಯಲ್ಲಿ ‘ಕುಸುಬಿ’ ಖರೀದಿಗೆ ನೋಂದಣಿ ಆರಂಭ: ಸಚಿವ ಶಿವಾನಂದ ಪಾಟೀಲ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert