ಕಲಬುರ್ಗಿ : ಕಲ್ಬುರ್ಗಿಯ ನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಿಢೀರ್ ಎಂದು ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಇಂದು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಲಬುರಗಿ ಕಚೇರಿಯ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದೆ.. ಲೋಕಾಯುಕ್ತ SP ಉಮೇಶ್ ನೇತ್ರತ್ವದ ತಂಡ ದಾಳಿ ಮಾಡಿದ್ದು ಇಲಾಖೆಯ ಕಡತಗಳನ್ನ ಪರಿಶೀಲನೆ ಮಾಡಿದೆ. ನಿಗಮದಲ್ಲಿನ ಯೋಜನೆ, ಅನುದಾನಗಳು ಪಟ್ಟಿ ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ನಡೆಸಿದೆ.