ಬೆಳಗಾವಿ : ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ 2 ಕುಟುಂಬಗಳ ನಡುವೆ ಕಲ್ಲು ತೂರಾಟ ಹಾಗೂ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆಸಲಾಗಿದ್ದು, ಈ ಒಂದು ಗಲಾಟೆಯಲ್ಲಿ ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹಳೆ ವಂಟಮೂರಿ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಹಿತಿ ತಿಳಿದ ಕಾಕತಿ ಪೊಲೀಸರು ಸ್ಥಳಕ್ಕೆ ದೌಡಯಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡು ಗುಂಪುಗಳ ನಡುವೆ ಮಾರಮಾರಿ ಆಗಿದ್ದು ಪರಸ್ಪರ ಕಲ್ಲುತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹಳೆ ವಂಟಮೂರಿಯಲ್ಲಿ ನಡೆದಿದೆ. ಗುಂಪು ಘರ್ಷಣೆಯಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಕುಡಗೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎರಡು ಕುಟುಂಬದ ಮಧ್ಯ ಏರ್ಪಟ್ಟ ಜಾಗದ ವಿವಾದಕ್ಕೆ ಈ ಒಂದು ಕಲ್ಲುತೂರಾಟ ನಡೆದಿದೆ. ಮಾರುತಿ ಹೊನ್ನುರೆ ಹಾಗು ಪರಸಪ್ಪ ಹೋಳಿಕಾರ್ ಕುಟುಂಬದ ಮಧ್ಯ ಈ ಒಂದು ಗಲಾಟೆ ನಡೆದಿದೆ. ಗಲಾಟೆ ಮಾಡುತ್ತಲೇ ವಾಗ್ವಾದ ತಾರಕಕ್ಕೆ ಏರಿ ಮನೆಯ ಮೇಲ್ಚಾವಣಿ ಏರಿದ ಕೆಲವು ಉದ್ರಿಕ್ತರು ಪಕ್ಕದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕಾಕತಿ ಪೊಲೀಸರು ಆಗಮಿಸಿ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಗ್ರಾಮಕ್ಕೆ ಒಂದು ಕೆ ಎಸ್ ಆರ್ ಪಿ ತಗೊಳ್ಳಿ ಮಾಡಲಾಗಿದ್ದು ಗಾಯಗೊಂಡ ಮಹಿಳೆ ನಿಂಗವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.