ಬೆಂಗಳೂರು: ಬಿಬಿಎಂಪಿಯ 2025-26ನೇ ಸಾಲಿನ ಅಯವ್ಯಯವನ್ನು ಮಾರ್ಚ್ 20 ಅಥವಾ 21 ರಂದು ಮಂಡಿಸುವ ಸಾಧ್ಯತೆ ಇದ್ದು, ಈ ಸಲ ಅಂದಾಜು 18,000 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸೋ ಸಾಧ್ಯತೆ ಇದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025-26ರ ಬಜೆಟ್ 18,000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ, ಸ್ವಂತ ಸಂಪನ್ಮೂಲವನ್ನೇ ನೆಚ್ಚಿಕೊಂಡು ಮಾರ್ಚ್ 20 ಅಥವಾ 21 ರಂದು ಅಯವ್ಯಯ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸತತ 5 ನೇ ವರ್ಷವೂ ಅಧಿಕಾರಿಗಳೇ ಆಯವ್ಯಯ ಮಂಡಿಸಲಿದ್ದಾರೆ. ಬಿಬಿಎಂಪಿ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ವಿಶೇಷ ಅನುದಾನ ಮೀಸಲಿಡಲಾಗುತ್ತದೆ. ಕಳೆದ ವರ್ಷ 12,369.50 ಕೋಟಿ ರೂ ಗಾತ್ರದ ಬಜೆಟ್ ಮಂಡಿಸಲಾಗಿತ್ತು.