ಕರಾಚಿ : ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೈಜಾಕ್ ಮಾಡಿದ್ದು, ಈವರೆಗೆ ಗುಂಡಿನ ಕಾಳಗದಲ್ಲಿ 30 ಕ್ಕೂ ಹೆಚ್ಚು ಪಾಕ್ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಕ್ವೆಟ್ಟಾದಿಂದ ಬಲೂಚಿಸ್ತಾನದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲು ಹೈಜಾಕ್ ಮಾಡಲಾಗಿದ್ದು, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನ ಸರ್ಕಾರವನ್ನು ಬಲೂಚ್ ರಾಜಕೀಯ ಕೈದಿಗಳು, ಮತ್ತು ಕಾರ್ಯಕರ್ತರನ್ನು 48 ಗಂಟೆಗಳ ಒಳಗೆ ಯಾವುದೇ ಷರತ್ತುಗಳಿಲ್ಲದೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ರೈಲು ಅಪಹರಣದಲ್ಲಿ 214 ಪಾಕಿಸ್ತಾನಿಗಳ ಪೈಕಿ 100 ಮಂದಿಯನ್ನು ಬಿಡುಗಡೆ ಮಾಡಿದ್ದು, ಉಳಿದವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾಗಿ ಬಿಎಲ್‌ಎ ಹೇಳಿಕೊಂಡಿದೆ. ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಬಲೂಚಿಸ್ತಾನದಲ್ಲಿ ರೈಲು ದಾಳಿಯ ನಂತರ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಬಿಎಲ್ಎ ನಾಗರಿಕರನ್ನು ಬಿಡುಗಡೆ ಮಾಡಿತು ಆದರೆ ಮಿಲಿಟರಿ ಸಿಬ್ಬಂದಿಯನ್ನು ಒತ್ತೆಯಾಳಾಗಿ ತೆಗೆದುಕೊಂಡಿತು. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ರಾಣಾ ದಿಲಾವರ್, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 350 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಮತ್ತು ಪರಿಹಾರ ರೈಲು ಶೀಘ್ರದಲ್ಲೇ ಸ್ಥಳಕ್ಕೆ ತಲುಪಲಿದೆ ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.