ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಉಪ ವಿಭಾಗಾಧಿಕಾರಿ ಯತೀಶ್ ಆರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ದಂಪತಿಗಳಿಗೆ ಶುಭ ಕೋರಿದರು.
ಇಂದು ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವಂತ ಹೊಸಕೆರೆ ಹಳ್ಳಿಯ ವಿ.ಲೆಗೆಸಿ ಕನ್ವಂನ್ಷನ್ ಸೆಂಟರ್ ನಲ್ಲಿ ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ.ಎಂ.ಎಸ್ ಅವರ ಆರತಕ್ಷತೆ ಸಮಾರಂಭ ನಡೆಯಿತು.
ಇಂದಿನ ಸಾಗರ ಉಪ ವಿಭಾಗಾಧಿಕಾರಿ ಅವರ ಆರತಕ್ಷತೆ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭಾಗಿಯಾಗಿ, ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ ಎಂ.ಎಸ್ ದಂಪತಿಗಳಿಗೆ ಶುಭ ಕೋರಿದರು.
ಅಂದಹಾಗೇ ನಾಳೆ ಬೆಳಗ್ಗೆ 10.30ಕ್ಕೆ ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಆರ್ ಹಾಗೂ ಡಾ.ಪ್ರಿಯಾಂಕಾ ಎಂ.ಎಸ್ ಅವರು ವಿವಾಹ ನೆರವೇರಲಿದೆ. ಅದಕ್ಕೂ ಪೂರ್ವಭಾವಿಯಾಗಿ ಇಂದು ರಿಸೆಪ್ಷನ್ ನಡೆಯಿತು.
ವರದಿ: ವಸಂತ ಬಿ ಈಶ್ವರಗೆರೆ
ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
‘ಬೀದಿ ಬದಿಯ ವ್ಯಾಪಾರಿ’ಗಳಿಗೆ ಗುಡ್ ನ್ಯೂಸ್: ಇನ್ಮುಂದೆ ‘ದಿನ ವಹಿ ಸುಂಕ’ ವಸೂಲಿ ರದ್ದು