ಬೆಂಗಳೂರು : ಅಭಿಮಾನಿ ಒಬ್ಬ ತನ್ನ ನೆಚ್ಚಿನ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ ಆದರೆ ಸೆಲ್ಫಿ ತೆಗೆದುಕೊಳ್ಳಲು ತಪ್ಪಲ್ಲ ಈ ಸಂದರ್ಭದಲ್ಲಿ ನಟಿಯ ಕೈಹಿಡಿದು ಎಳೆದಿದ್ದಾನೆ ಅಭಿಮಾನಿ ಇದರಿಂದ ಕೋಪಗೊಂಡ ನಟಿ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ಹೌದು ಕೈ ಹಿಡಿದು ಎಳೆದ ಅಭಿಮಾನಿಗೆ ನಟಿಯಿಂದ ಕಪಾಳ ಮೋಕ್ಷವಾಗಿದ್ದು, ಅಭಿಮಾನಿ ಕಪಾಳಕ್ಕೆ ನಟಿ ರಾಗಿಣಿ ದ್ವಿವೇದಿ ಅವರು ಬಾರಿಸಿದ್ದಾರೆ. ಖಾಸಗಿ ಕಾರ್ಯಕ್ರಮ ಒಂದರಲ್ಲಿ ರಾಗಿಣಿ ಅವರು ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ನಟಿ ರಾಗಿಣಿ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸ್ಟೇಜ್ ಮೇಲೆ ರಾಗಿಣಿ ಅವರು ನಿಂತಾಗ ಅಭಿಮಾನಿಯೊಬ್ಬ ಸೆಲ್ಫಿ ಸಲುವಾಗಿ ರಾಗಿಣಿ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿ ಮುಂದಾಗಿದ್ದಾನೆ. ಆದರೆ ಈ ವೇಳೆ ರಾಗಿಣಿ ಕೈ ಹಿಡಿದು ಅಭಿಮಾನಿ ಎಳೆದಿದ್ದಾನೆ. ಇದರಿಂದ ಸ್ವಲ್ಪ ವಿಚಲಿತರಾದ ರಾಗಿಣಿ ಅವರು ಅಭಿಮಾನಿ ಕಪಾಳಕ್ಕೆ ಬಾರಿಸಿದ್ದಾರೆ. ಈ ಒಂದು ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ.