ಬೆಂಗಳೂರು : ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಡಿ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಿದರು. ಗ್ರೇಟರ್ ಬೆಂಗಳೂರು ಅಥಾರಿಟಿ ಮೇಲೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ಒಂದು ಚರ್ಚೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಭಾಗಿಯಾಗಿದ್ದು, ವಿಧೇಯಕವನ್ನು ಬೆಂಬಲಿಸಿ ST ಸೋಮಶೇಖರ್ ಮಾತನಾಡಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರು ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾತನ್ನು ಸ್ವಾವತಿಸಿದರು. ಮೇಜು ತಟ್ಟಿ ಸೋಮಶೇಖರ್ ಮಾತನ್ನು ಕಾಂಗ್ರೆಸ್ ಸದಸ್ಯರು ಸ್ವಾಗತಿಸಿದರು. ಬಿಜೆಪಿ ಶಾಸಕರ ಅಭಿಪ್ರಾಯವನ್ನು ಸೋಮಶೇಖರ್ ಆಕ್ಷೇಪಿಸಿ ಮಾತನಾಡಿದ್ದು, ಚರ್ಚೆಯುದಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದರು. ಆದರೆ ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸೋಮಶೇಖರ್ ಮಾತನಾಡುವ ಸಂದರ್ಭದಲ್ಲಿ ಮೌನಕ್ಕೆ ಜಾರಿದ್ದರು.