ಬೆಂಗಳೂರು : ದುಬೈ ನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಕಳೆದ 3 ದಿನಗಳಿಂದ ಡಿ ಆರ್ ಐ ಕಸ್ಟಡಿಯಲ್ಲಿದ್ದರು. ಇದೀಗ ನಟಿ ರನ್ಯಾರಾವ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೋರ್ಟ್ ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದರು. ಈ ವೇಳೆ ಹಲ್ಲೆ ಮಾಡಿದ್ರ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಕೋರ್ಟ್ನಲ್ಲೇ ನಟಿ ರನ್ಯರಾವ್ ಅತ್ತಿದ್ದಾರೆ. ನಾನು ಎಮೋಷನಲ್ ಬ್ರೋಕನ್ ಆಗಿದ್ದೇನೆ. ಕೆಟ್ಟದಾಗಿ ನನಗೆ ಬೈದಿದ್ದಾರೆ. ತಲೆಗೆ ಸುತ್ತಿಗಿಯಲ್ಲಿ ಹೊಡೆದಂತೆ ಪ್ರಶ್ನೆ ಮಾಡಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ಕೆಟ್ಟ ಪದ ಬಳಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿಲ್ಲ. ಹೇಳಿಲ್ಲ ಅಂದರೆ ಏನಾಗುತ್ತೆ ಅನ್ನೋದು ಗೊತ್ತಲ್ಲ. ಒಂದು ಬೆದರಿಕ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಜಜ್ ಮುಂದೆ ನಟಿ ರನ್ಯಾರಾವ್ ತಿಳಿಸಿದ್ದಾರೆ.
ಈ ವೇಳೆ ನ್ಯಾಯಾಧೀಶರು ಡಿ ಆರ್ ಐ ಅಧಿಕಾರಿಗಳಿಗೆ ಉತ್ತರ ನೀಡುವಂತೆ ಸೂಚನೆ ನೀಡಿದರು. ಬಳಿಕ ಸಾಕ್ಷಿಗಳನ್ನು ಮುಂದೆ ಇಟ್ಟು ಕೇಳಿದ್ದೇವೆ. ರನ್ಯಾ ರಾವ್ ಗೆ ಯಾವುದೇ ಹಲ್ಲೆ ಮಾಡಿಲ್ಲ. ಸಿಸಿಟಿವಿ ಅಂದ್ರೆ ನಾವು ವಿಚಾರಣೆ ನಡೆಸಿದ್ದೇವೆ ಸಿಸಿಟಿವಿ ಕೋರ್ಟಿಗೆ ಪ್ರೊಡ್ಯೂಸ್ ಮಾಡೋಕೆ ತಯಾರಿದ್ದೇವೆ ಆದರೆ ಯಾವುದೇ ರೀತಿಯಾಗಿ ಮುಚ್ಚುಮರೆ ವಿಚಾರಣೆ ನಡೆಸಿಲ್ಲ. ಕೋರ್ಟ್ ಕೇಳಿದರೆ ಸಿಸಿಟಿವಿ ದೃಶ್ಯ ಸಲ್ಲಿಸುತ್ತೇವೆ.
ಈ ವೇಳೆ ಡಿ ಆರ್ ಐ ಅಧಿಕಾರಿಗಳು ನ್ಯಾಯಾಲಯಕ್ಕೆ ರಿಮಂಡ್ ಅರ್ಜಿ ಸಲ್ಲಿಸಿದ್ದು ರನ್ಯಾ ರಾವ್ ರನ್ನು ಅವರನ್ನು 24 ಗಂಟೆ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲಾಗಿದೆ. ಸಿಸಿಟಿವಿ ಮುಂದೆ ವಿಚಾರಣೆ ಮಾಡಲಾಗಿದೆ.ವಿಚಾರಣೆಯ ವೇಳೆ ಡಿ ಆರ್ ಐ ಪರ ವಕೀಲರು ಉಪಸ್ಥಿತರು ಇದ್ದರಾ? ಎಂದು ಕೇಳಿದಾಗ ನಟಿ ರನ್ಯಾ ರಾವ್ ಇಲ್ಲ ವಕೀಲರು ಹಾಜರು ಇರಲಿಲ್ಲ ಎಂದು ಹೇಳಿಕೆ ನೀಡಿದರು.