ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ಇಡೀ ದೇಶದ ಹಲವಾರು ಭಾಗಗಳಿಂದ ಭಕ್ತರು ಭೇಟಿ ನೀಡಿದ್ದರು. ಇದೀಗ ಕುಂಭಮೇಳದ ಹೆಸರಿನಲ್ಲಿ ಅನೇಕ ಅಮಾಯಕ ಜನರಿಗೆ ಸುಮಾರು 70 ಲಕ್ಷ ರೂಪಾಯಿ ಪಡೆದು ವಂಚನೆ ಎಸೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಆರೋಪಿ ರಾಘವೇಂದ್ರ ರಾವ್ ನನ್ನು ಇದೀಗ ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಆರೋಪಿ ರಾಘವೇಂದ್ರ ರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರಿಗೆ ಆರೋಪಿ ರಾಘವೇಂದ್ರರಾವ್ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ಬುಕ್ ನಲ್ಲಿ ಜಾಹಿರಾತು ಮೂಲಕ ಅಮಾಯಕರನ್ನು ಸಂಪರ್ಕ ಮಾಡುತ್ತಿದ್ದ. ಪಾಂಚಜನ್ಯ ಟೂಲ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿ ಅಯೋಧ್ಯೇ, ಕಾಶಿ ಮತ್ತು ಪ್ರಯಾಗ್ ರಾಜ್ ಪ್ರವಾಸದ ಪ್ಯಾಕೇಜ್ ಬಗ್ಗೆ ತಿಳಿಸುತ್ತಿದ್ದ.
ಏಳು ದಿನಗಳ ಪ್ಯಾಕೇಜ್ ಗೆ ತಲಾ 49 ಸಾವಿರ ರೂಪಾಯಿಯನ್ನು ರಾಘವೇಂದ್ರ ರಾವ್ ಪಡೆಯುತ್ತಿದ್ದ ಎನ್ನಲಾಗಿದೆ.ಆದರೆ ಪ್ರವಾಸದ ಹೆಸರಿನಲ್ಲಿ ಸುಮಾರು 70ಲಕ್ಷ ವಂಚಿಸಿದ್ದಾನೇ. ಜಾತಿಯ ಹೆಸರಲ್ಲಿ ಅಮಾಯಕರನ್ನು ಸೆಳೆದು ರಾಘವೇಂದ್ರ ವಂಚಿಸಿದ್ದಾನೆ. ಜಾತಿ ಸಂಘಟನೆ ಗ್ರೂಪ್ ಗಳಲ್ಲಿ ಪ್ರವಾಸದ ಜಾಹೀರಾತುಗಳನ್ನು ರಾಘವೇಂದ್ರ ರಾವ್ ಹಾಕುತ್ತಿದ್ದ.
ಬಳಿಕ ಹಣ ಪಡೆದು ಎರಡು ರೀತಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಕೆಲವರಿಗೆ ಟಿಕೆಟ್ ಬುಕ್ ಮಾಡಿ ನಂತರ ರದ್ದು ಮಾಡಿ ಹಣ ವಾಪಸ್ ತನ್ನ ಅಕೌಂಟಿಗೆ ಹಾಕಿಕೊಳ್ಳುತ್ತಿದ್ದ. ಅಲ್ಲದೆ ಕೆಲವರು ಪ್ರಯಾಗ್ ರಾಜ್ ಪ್ರವಾಸದ ನಂತರ ರಿಟರ್ನ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾನೆ. ಟಿಕೆಟ್ ಅವರದ್ದು ಮಾಡಿ ಹಣವನ್ನು ತನ್ನ ಖಾತೆಗೆ ವಾಪಸ್ ಹಾಕಿಸಿಕೊಳ್ಳುತ್ತಿದ್ದ. ಟಿಕೆಟ್ ಕ್ಯಾನ್ಸಲ್ ಬಳಿಕ ಆರೋಪಿ ರಾಘವೇಂದ್ರ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ.
ಈ ಬಗ್ಗೆ 20 ಜನರು ಗೋವಿಂದರಾಜ ನಗರ ಪೊಲೀಸರಿಗೆ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಘವೇಂದ್ರ ರವರನ್ನು ಹೊಂದಿಸಿದ್ದಾರೆ. ಅಮಾಯಕರ ಹಣದಲ್ಲಿ ರಾಘವೇಂದ್ರ ಬೆಟ್ಟಿಂಗ್ ಗಾಡಿ ಎಲ್ಲ ಹಣ ಸೋತಿದ್ದಾನೆ ಪ್ರಾಥಮಿಕ ತಣಿಕೆಯಲ್ಲಿ ಬೆಟ್ಟಿಂಗ್ ಆಪ್ ನಲ್ಲಿ ಹಣ ಹಾಕಿರುವುದು ಬಯಲಾಗಿದೆ. ಸದ್ಯ ಮತ್ತಷ್ಟು ತನಿಖೆಯನ್ನು ಗೋವಿಂದರಾಜ ಠಾಣೆ ಪೊಲೀಸರು ನಡೆಸುತ್ತಿದ್ದಾರೆ.