ಕೆಎನ್ಎನ್ ಡಿಜಿಟಲ್ ಡೆಸ್ಕ್: ಶ್ರೀ ಮಂಜುನಾಥನಿಗೆ ಅರ್ಪಿತವಾದ ಪುಣ್ಯಕ್ಷೇತ್ರ ಧರ್ಮಸ್ಥಳ ಹಿಂದೂ ದೇವಾಲಯನಾ? ಅಥವಾ ಜೈನ ದೇವಾಲಯನಾ? ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪೋಟೋ ಒಂದು ಹರಿದಾಡುತ್ತಿದೆ. ಅದರಲ್ಲಿ ಏನಿದೆ ಎನ್ನುಬ ಬಗ್ಗೆ ಮುಂದೆ ಓದಿ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳ. ಸುಮಾರು ಏಳರಿಂದ ಎಂಟು ನೂರು ವರುಷಗಳ ಇತಿಹಾಸ ಹೊಂದಿರುವ ಪವಿತ್ರ ಕ್ಷೇತ್ರ. ಜೈನ ಬಂಟ ಸಮುದಾಯ ಆರಂಭಿಸಿರುವ ಈ ದೇವಾಲಯ.
Dharmasthala Governing Religion: ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯನ್ನು ಆರಾಧನೆ ಮಾಡಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಮಂದಿ, ಇನ್ನೂ ಕೆಲವೊಮ್ಮೆ ಲಕ್ಷಾಂತರ ಜನ ಸಮೂಹವೇ ಸೇರುವ ಈ ಪುಣ್ಯಕ್ಷೇತ್ರ ಒಂದಲ್ಲ, ಎರಡಲ್ಲ ಅದೆಷ್ಟೋ ದಾನ ಧರ್ಮಗಳನ್ನು ಮಾಡುತ್ತಾ ಸಮಾಜಕ್ಕೆ ಕೊಡುಗೆ ನೀಡುತ್ತಿದೆ.
ಸುಮಾರು ಏಳರಿಂದ ಎಂಟು ನೂರು ವರುಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂಬುದು ಪ್ರತೀತಿ
ಅಂದಹಾಗೆ ಇಂದಿನ ಧರ್ಮಸ್ಥಳದ ಹಿಂದಿನ ಹೆಸರು ‘ಕುಡುಮ’, ಸದ್ಯ ಈ ಕ್ಷೇತ್ರದ ಬಗ್ಗೆ ಕಳೆದ ಕೆಲದಿನಗಳಿಂದ ಭಾರೀ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಧರ್ಮಸ್ಥಳ ಕ್ಷೇತ್ರ ಹಿಂದೂ ದೇವಾಲಯವೇ? ಅಥವಾ ಜೈನ ಧರ್ಮಕ್ಕೆ ಸಂಬಂಧಪಟ್ಟ ಕ್ಷೇತ್ರವೇ? ಎಂಬ ಪ್ರಶ್ನೆ. ಸದ್ಯ ಉದ್ಭವವಾಗಿದೆ. ಈ ಗೊಂದಲಕ್ಕೆ ಈ ವರದಿಯಲ್ಲಿ ಉತ್ತರ ನೀಡಲಾಗಿದೆ.
ಇತಿಹಾಸದ ಪುಟಗಳಲ್ಲಿ ಉಲ್ಲೇಖಗೊಂಡ ಪ್ರಕಾರ, ಜೈನ ಧರ್ಮದ ಮುಖ್ಯಸ್ಥ ನೆಲ್ಯಾಡಿ ಬೀಡು ಎಂಬ ಮನೆಯಲ್ಲಿ ಧರ್ಮನಿಷ್ಠರಾಗಿ ವಾಸವಾಗಿದ್ದ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳಿ ಎಂಬ ದಂಪತಿಯ ಮನೆಗೆ ಒಂದೊಮ್ಮೆ ನಾಲ್ವರು ಅತಿಥಿಗಳು ಆಗಮಿಸಿದ್ದರು. ಇವರನ್ನು ನಿಷ್ಠೆಯಿಂದ ಪೆರ್ಗಡೆ ದಂಪತಿ ಸತ್ಕಾರ ಮಾಡಿದ್ದರು.
ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ಖಾಲಿ ಮಾಡಿ ದೈವಗಳಿಗೆ ಬಿಟ್ಟು ಕೊಟ್ಟರು. ಅಂದಿನಿಂದ ಕಾಳರಾಹು-ಪುರುಷದೈವ, ಕಳರ್ಕಾಯಿ ದೈವ, ಕುಮಾರಸ್ವಾಮಿ-ಪುರುಷದೈವ, ಹಾಗೂ ಕನ್ಯಾಕುಮಾರಿ ದೈವ ಆ ಮನೆಯಲ್ಲಿ ನೆಲೆನಿಂತರು. ಆ ನಂತರ ದೈವಗಳ ಆವಯಂಡ ಪರ್ಗಡೆಯವರು ದೈವಗಳಿಗೆ ಗುಡಿಕಟ್ಟಿಸಿ ಬ್ರಾಹ್ಮಣ ಅರ್ಚಕರ ಸಮ್ಮುಖದಲ್ಲಿ ನಿತ್ಯ ಪೂಜೆಗಳನ್ನು ನೆರವೇರಿಸಿದರು.
ಆದಾದ ಬಳಿಕ ಶಿವಯೋಗಿಗಳು ಈ ಪವಿತ್ರ ಸ್ಥಳದಲ್ಲಿ ಈಶ್ವರ ಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಅಷ್ಟೇ ಅಲ್ಲದೆ ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.
ಧರ್ಮಸ್ಥಳ, ರಾಜ್ಯದ ಅತ್ಯಂತ ಪುರಾತನ ದೇವಾಲಯ. ಜೈನ ಬಂಟ ಸಮುದಾಯ ಆರಂಭಿಸಿರುವ ಈ ದೇವಾಲಯದ ಗರ್ಭಗುಡಿಯ ಒಳಗೆ ವೈಷ್ಣವ ಬ್ರಾಹ್ಮಣರಿಗೆ ಹೊರತುಪಡಿಸಿ ಇನ್ಯಾರಿಗೂ ಪ್ರವೇಶಕ್ಕೆ ಅವಕಾಶವಿಲ್ಲ. ಇನ್ನು ಅನೇಕರಿಗೆ ಧರ್ಮಸ್ಥಳ ಹಿಂದೂ ದೇವಾಲಯವಾ ಅಥವಾ ಜೈನ ದೇವಾಲಯವಾ ಎಂಬ ಪ್ರಶ್ನೆ ಇದೆ. ಈ ಕ್ಷೇತ್ರ ಜೈನ ಬಂಟ ಸಮುದಾಯ ನಿರ್ವಹಿಸಿಕೊಂಡು ಬರುತ್ತಿರುವ, ವೈಷ್ಣವ ಬ್ರಾಹ್ಮಣರು ಪೂಜಿಸುವ ಏಕೈಕ ಕ್ಷೇತ್ರ ಎಂದೇ ಹೇಳಬಹುದು.
ವೈಷ್ಣವರ ಪೂಜೆ, ಜೈನರ ಆಡಳಿತ ಮತ್ತು ಸರ್ವರ ದೇವರು.. ಲೋಕದಲ್ಲಿ ಬೇರೆಲ್ಲೂ ಕಾಣಸಿಗದ ಅಪರೂಪದ ಕ್ಷೇತ್ರ ಅಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ, ಈ ಸ್ಥಳವನ್ನು ವಿದನ ಅಚ್ಚುಮೆಚ್ಚಿನ ಸ್ಥಳ ಎಂದೂ ಸಹ ಕರೆಯಲಾಗುತ್ತದೆ.
(ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಪೋಟೋ ಪ್ರತಿಯ ಮಾಹಿತಿಯಾಗಿದೆ. ಇದಕ್ಕೂ ಕನ್ನಡ ನ್ಯೂಸ್ ನೌಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಈ ಮೂಲಕ ಸ್ಪಷ್ಟಪಡಿಸಿದೆ. ವೈರಲ್ ಆಗಿರುವಂತ ಪೋಟೋ ಪ್ರತಿಯನ್ನು ಈ ಕೆಳಗೆ ಹಾಕಲಾಗಿದ್ದು, ಪರಿಶೀಲಿಸಬಹುದಾಗಿದೆ.)
ಹೊಸ ‘APL-BPL ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆ, ದಾಖಲೆಗಳೇನು.? ಇಲ್ಲಿದೆ ಮಾಹಿತಿ