ಗದಗ : ರಾಜ್ಯದಲ್ಲಿ ಇಂದು ಮತ್ತೊಂದು ಘೋರವಾದ ದುರಂತ ಸಂಭವಿಸಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರು ಪಾಲಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರಲಹಳ್ಳಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ.
ಮೃತರನ್ನು ಶರಣಪ್ಪ ಬಡಿಗೇರ್ (34) ಮಹೇಶ್ (36) ಹಾಗೂ ಗುರುನಾಥ (38) ನೀರು ಪಾಲಾಗಿದ್ದಾರೆ. ಆಂಜನೇಯನ ದರ್ಶನ ಪಡೆದು ನದಿಗೆ ಮೂವರು ಈಜಲು ಇಳಿದಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿಯಿಂದ ಐವರು ಸ್ನೇಹಿತರ ತಂಡ ಇಲ್ಲಿ ಬಂದಿತ್ತು.ದೇವರ ದರ್ಶನ ಪಡೆದು ನದಿಯಲ್ಲಿ ಈಜಲು ತೆರಳಿದ್ದಾರೆ. ಅಲ್ಲದೆ ಇಂದು ಶರಣಪ್ಪ ಬಡಿಗೇರ್ ಹುಟ್ಟುಹಬ್ಬ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಶರಣಪ್ಪ ಸ್ನೇಹಿತರೊಂದಿಗೆ ಆಂಜನೇಯನ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗಿದೆ.
ಈ ವೇಳೆ ಈಜಲು ಬಾರದಿದ್ದರೂ ಕೂಡ ಮಹೇಶ್ ಬಡಿಗೇರ್ ನದಿಗೆ ಇಳಿದಿದ್ದಾನೆ. ಈಜಲು ಬಾರದೆ ನದಿಯಲ್ಲಿ ಮಹೇಶ್ ಕೊಚ್ಚಿಕೊಂಡು ಹೋಗುತ್ತಿದ್ದ ಇದನ್ನು ನೋಡಿದ ಶರಣಪ್ಪ ಮತ್ತು ಗುರುನಾಥ್ ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಆದರೆ ಈ ವೇಳೆ ಮೂವರು ನದಿಯಲ್ಲಿ ನೀರು ಪಾಲಾಗಿದ್ದಾರೆ ಸದ್ಯ ಮೃತರಿಗಾಗಿ ಶೋಧಕಾರ್ಯ ನಡೆಯುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಮೀನುಗಾರರಿಂದ ಶೋಧ ಕಾರ್ಯ ನಡೆಯುತ್ತಿದೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.