ತುಮಕೂರು: ರಾಜ್ಯದಲ್ಲಿ ವೀಲ್ಹಿಂಗ್ ಪುಂಡರ ವಿರುದ್ಧ ಸರ್ಕಾರ ಕಠಿಣ ನಿಲುವು ಹೊಂದಿದೆ. ಅಲ್ಲದೇ ವೀಲ್ಹಿಂಗ್ ಮಾಡುವವರ ವಿರುದ್ಧ ಕೇಸ್ ಹಾಕಿ ಬಿಸಿ ಮುಟ್ಟಿಸುತ್ತಿದೆ. ಇದರ ನಡುವೆ ರಾಜ್ಯದಲ್ಲಿ ವೀಲ್ಹಿಂಗ್ ಪುಂಡರ ಹಾವಳಿಗೆ ಮತ್ತೊಂದು ಬಲಿಯನ್ನು ಪಡೆಯಲಾಗಿದೆ. ಹಾಲು ತರೋದಕ್ಕೆ ಹೋಗಿದ್ದಂತ ವ್ಯಕ್ತಿಯೊಬ್ಬರು ವೀಲ್ಹಿಂಗ್ ಪುಂಡರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ತುಮಕೂರಿನ ಟೂಡಾ ಕಚೇರಿಯ ಬಳಿಯಲ್ಲೇ ಇಂದು ಬೆಳಗ್ಗೆ ವೀಲ್ಹಿಂಗ್ ಪುಂಡರ ಅಟ್ಟ ಹಾಸಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತಿಪ್ಪೇಸ್ವಾಮಿ ಎಂಬುವರೇ ಮೃತ ವ್ಯಕ್ತಿಯಾಗಿದ್ದಾರೆ.
ಇಂದು ಬೆಳಿಗ್ಗೆ ಹಾಲು ತರೋದಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದಂತ ಪುಂಡರು ತಿಪ್ಪೇಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ತಿಪ್ಪೇಸ್ವಾಮಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ರಾಜ್ಯದಲ್ಲಿ ‘ಭೂ ಪರಿವರ್ತನೆ’ ವೇಳೆ ‘ತಹಶೀಲ್ದಾರ್, RI’ ಈ ಅಂಶ ಪರಿಗಣನೆ ಕಡ್ಡಾಯ
ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಪುರುಷರಿಗಿಂತ ಮಹಿಳಾ ಹೂಡಿಕೆದಾರರು ಮೇಲುಗೈ ಸಾಧಿಸಿದ್ದಾರೆ: ವರದಿ | Mutual fund
ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ಈ ವರ್ಷ 2 ಲಕ್ಷ `ಪಂಪ್ ಸೆಟ್’ಗಳು ಸಕ್ರಮ.!