ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರನ್ನು ನಿನ್ನೆ DRI ಅಧಿಕಾರಿಗಳು 3 ದಿನಗಳ ಕಾಲ ತಮ್ಮ ಕಸ್ಟಡಿಗೆ ತೆಗೆದುಕೊಂಡು ಇಂದಿನಿಂದ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಡಿ ಆರ್ ಐ ಹಿರಿಯ ಅಧಿಕಾರಿಗಳು ನಟಿ ರನ್ಯಾರಾವ್ ಅವರನ್ನು ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ.
ಹೌದು DRI ಹಿರಿಯ ಅಧಿಕಾರಿಗಳಿಂದ ರನ್ಯಾಗೆ ಇಂದಿನಿಂದ ಡ್ರಿಲ್ ನಡೆಯಲಿದೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು, ದುಬೈ ನಿಂದ ಇದುವರೆಗೂ ಎಷ್ಟು ಬಾರಿ ಅಕ್ರಮವಾಗಿ ಚಿನ್ನ ಸಾಗಿಸಿದ್ದಾಳೆ? ಹಾಗೂ ಬೆಂಗಳೂರಿಗೆ ತಂದು ಯಾರಿಗೆ ಕೊಟ್ಟಿದ್ದಾಳೆ? ಎಂದು ಡಿಆರ್ಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ರನ್ಯಾ ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಮೊಬೈಲ್ ಮತ್ತು ಲ್ಯಾಪ್ಟಾಪ್ ಪಡೆದು ಮಾಹಿತಿ ಮೇಲೆ ವಿಚಾರ ನಡೆಸಲಿದ್ದು ಮನೆಯಲ್ಲಿ ಸಿಕ್ಕ ಹಣ ಚಿನ್ನದ ಮೂಲದ ಬಗ್ಗೆಯೂ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.