ತುಮಕೂರು : ತುಮಕೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ, ಸುಮಾರು 10ಕ್ಕೂ ಅಧಿಕ ಅಂತರಾಜ್ಯ ಕಳ್ಳರ ಬಂಧನ ಮಾಡಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ವೆಂಕಟ್ ಹೇಳಿಕೆ ನೀಡಿದ್ದಾರೆ.
ಕಳೆದ ಎರಡು ತಿಂಗಳಿಂದ ಕಳ್ಳತನ ಮಾಡಿದ್ದ ಅಂತರಾಜ್ಯ 10 ಜನ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ವಿವಿಧಡೆ ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. 11 ಪ್ರಕರಣದಲ್ಲಿ 23 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಆಗಿತ್ತು ಎಂದು ತಿಳಿಸಿದರು.
ತುಮಕೂರು ನಗರ, ಮಧುಗಿರಿ, ಶೀರಾ, ಹುಲಿಯೂರುದುರ್ಗ, ಹೊಸ ಬಡಾವಣೆ, ಕೊಡಿಗೆನಹಳ್ಳಿ, ಅಮೃತೂರು, ತಿಪಟೂರು, ಜಯನಗರ ಸೇರಿದಂತೆ ವಿವಿಧಡೆ ಕಳ್ಳತನ ಪ್ರಕರಣ ನಡೆದಿತ್ತು. ಇದೀಗ ಈ ಒಂದು ಪ್ರಕರಣಗಳ ಹಿನ್ನೆಲೆಯಲ್ಲಿ 10 ಜನ ಅಂತರಾಜ್ಯ ಕಳ್ಳರನ್ನು ಅರೆಸ್ಟ್ ಮಾಡಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ವೆಂಕಟ್ ಅವರು ಮಾಹಿತಿ ನೀಡಿದರು.