ಬೆಳಗಾವಿ : ಸಿಎಂ ಸಿದ್ದರಾಮಯ್ಯ ಹಿಂದೂ ವಿರೋಧಿ ಬಜೆಟ್ ಮಂಡನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಯಾವುದೇ ದಿಕ್ಕು ದೆಸೆ ಇಲ್ಲದ ಬಜೆಟ್ ಇದಾಗಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಶೂನ್ಯವಾಗುವ ಸ್ಥಿತಿ ತಲುಪುತ್ತಿದೆ. ಕಾಂಗ್ರೆಸ್ಸಿಗೆ ಕೇವಲ ಮುಸ್ಲಿಮರು ಮಾತ್ರ ಕಣ್ಣಿಗೆ ಕಾಣುತ್ತಿದ್ದಾರೆ. ಮೊಹಮ್ಮದ್ ಅಲಿ ಜಿನ್ನಾ ಏನಾದ್ರೂ ಬದುಕಿದ್ದರೆ, ಸಿಎಂ ಸಿದ್ದರಾಮಯ್ಯ ಅವರನ್ನು ಕರೆದು ಸನ್ಮಾನ ಮಾಡುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ, ಕೃಷಿ, ಗ್ರಾಮೀಣ ಹಾಗು ಶಿಕ್ಷಣ ಕ್ಷೇತ್ರಕ್ಕೆ ಸೀಮಿತವಾದಂತಹ ಬಜೆಟ್ ಇದಾಗಿದೆ. ಈ ರೀತಿಯ ಬಜೆಟ್ ಮಂಡಿಸಿ ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಕೇವಲ ಮುಸ್ಲಿಮರು ಮಾತ್ರ ಕಣ್ಣಿಗೆ ಕಾಣುತ್ತಿದ್ದಾರೆ. ಮೊಹಮ್ಮದ್ ಅಲಿ ಜಿನ್ನಾ ಏನಾದ್ರೂ ಬದುಕಿದ್ದರೆ, ಸಿಎಂ ಸಿದ್ದರಾಮಯ್ಯ ಅವರನ್ನು ಕರೆದು ಸನ್ಮಾನ ಮಾಡುತ್ತಿದ್ದರು. ಪಾಕಿಸ್ತಾನ ರಚನೆ ಆಗಬೇಕು ಅಂತಾನು ಜಿನ್ನಾ ಕೇಳುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಹೆಸರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಅನುದಾನ ಕೊಟ್ಟಿಲ್ಲ. ಆರ್ಥಿಕವಾಗಿ ಶಿಸ್ತು ಕೂಡ ಕಾಪಾಡಿಲ್ಲ. ಈ ಬಜೆಟ್ ನಿಂದ ಕರ್ನಾಟಕ ರಾಜ್ಯ ಭಾರಿ ಹಿನ್ನಡೆ ಅನುಭವಿಸಲಿದೆ. ಮುಸ್ಲಿಮರಿಗೆ ಕೆಐಎಡಿಬಿಯಲ್ಲಿ ಜಾಗ ಕೊಟ್ಟಿದ್ದಾರೆ. ಇದು ಸಂಪೂರ್ಣ ಹಿಂದೂ ವಿರೋಧಿ ಬಜೆಟ್ ಆಗಿದೆ.ತುಷ್ಟಿಕರಣ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರ ಕೇವಲ ಅಲ್ಪಸಂಖ್ಯಾತರಿಗೆ ಸೇರಿದೆ ಎಂದು ಪ್ರೂವ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಭಯೋತ್ಪಾದಕರಿಗೆ ಬ್ರದರ್ ಅಂತ ಕರೆಯುತ್ತಾರೆ. ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಅಮಾಯಕರು ಅಂತಾರೆ.
ಅಲ್ಪಸಂಖ್ಯಾತರನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಏನು ಮಾಡಿದರು ನಡೆಯುತ್ತೆ ಅನ್ನುವ ಮಟ್ಟಿಗೆ ತುಷ್ಟಿಕರಣ ಮಾಡುತ್ತಿದ್ದಾರೆ. ಸಚಿವ ಜಮೀರ್ ಬಜೆಟ್ ಸಿದ್ದಪಡಿಸಿದ್ದಾರೆ ಅಂತ ಸಂದೇಶ ಕೊಡಲು ಬಜೆಟನ್ನು ಸಚಿವ ಜಮಿರ್ ಕೈಯಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಲ್ಟ್ರಾ ಕಮ್ಯುನಲ್, ಅಲ್ಟ್ರಾ ಲಿಟಲ್ ಮುಖ್ಯಮಂತ್ರಿ ಬೇರೆ ಯಾವ ರಾಜ್ಯದಲ್ಲೂ ಕೂಡ ಈ ಮಟ್ಟಿಗೆ ಬಜೆಟ್ ನೀಡಿಲ್ಲ ಎಂದು ಬೆಳಗಾವಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.