ಬೆಂಗಳೂರು: ಮೊಣಗಾಲು ನೋವಿನಿಂದ ಬಳಲುತ್ತಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಇಂದು ಮೊದಲ ಹತ್ತು ನಿಮಿಷಗಳ ಕಾಲ ರಾಜ್ಯ ಬಜೆಟ್ ಅನ್ನು ನಿಂತೇ ಮಂಡಿಸಲಿದ್ದಾರೆ. ಆ ಬಳಿಕ ಇಡೀ ಬಜೆಟ್ ಅನ್ನು ಕುಳಿತೇ ಮಂಡನೆ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 16ನೇ ಬಜೆಟ್ ಅನ್ನು ಇಂದು ಮಂಡಿಸುತ್ತಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಂದ ಬಜೆಟ್ ಹಸ್ತಪ್ರತಿಯನ್ನು ಪಡೆದಿರುವಂತ ಅವರು, ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮೋದನೆಯನ್ನು ಪಡೆದಿದ್ದಾರೆ.
ಇದೀಗ ವಿಧಾನಸೌಧಕ್ಕೆ ಆಗಮಿಸುತ್ತಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಕೆಲವೇ ಕ್ಷಣಗಳಲ್ಲಿ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ 2025-26 ಅನ್ನು ಮಂಡನೆ ಮಾಡಲಿದ್ದಾರೆ.
ಮೊಣಕಾಲಿನ ನೋವಿನ ಕಾರಣದಿಂದಾಗಿ ಮೊದಲ ಹತ್ತು ನಿಮಿಷ ನಿಂತು ಬಜೆಟ್ ಮಂಡನೆ ಮಾಡಲಿರುವಂತ ಅವರು, ಆ ಬಳಿಕ ಮುಂದುವರೆದ ಬಜೆಟ್ ಅನ್ನು ಕುಳಿತೇ ಮಾಡಲಿರುವುದಾಗಿ ತಿಳಿದು ಬಂದಿದೆ.
BREAKING NEWS: ಇದು ಸಿದ್ಧರಾಮಯ್ಯನವರ ಕೊನೇ ಬಜೆಟ್: ವಿಪಕ್ಷ ನಾಯಕ ಆರ್.ಅಶೋಕ್
ರಾಜ್ಯದಲ್ಲಿ ಗಲಭೆ ಸೃಷ್ಟಿಸಿದರೇ ಸ್ವಯಂಪ್ರೇರಿತ ಕೇಸ್ ದಾಖಲು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ