ಬೆಂಗಳೂರು: ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 1640 ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೈ ರೆಸೂಲುಷನ್ ಕ್ಯಾಮೆರಾಗಳನ್ನು ಹಾಕಿದ್ದೇವೆ. ಈ ಕ್ಯಾಮೆರಾಗಳಿಗೆ ಎಐ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ. ಪೊಲೀಸರಿಗೆ ಬಾಡಿವೊರ್ನ್ ಕ್ಯಾಮೆರಾಗಳನ್ನು ಒದಗಿಸಿದ್ದೇವೆ. ಏನೆಲ್ಲಾ ಟೆಕ್ನಾಲಜಿಗಳಿವೆಯೋ ಅದೆಲ್ಲವನ್ನು ಬೆಂಗಳೂರು ನಗರ ಪೊಲೀಸ್ ಸೇರಿದಂತೆ ರಾಜ್ಯದ ಎಲ್ಲ ಪೊಲೀಸರಿಗೆ ಒದಗಿಸಲಾಗಿದೆ. ಕರ್ನಾಟಕ ಪೊಲೀಸರು ಟೆಕ್ನಾನಾಲಾಜಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಭೋಜೇಗೌಡ ಅವರು ಇಂದು ಪ್ರಶ್ನೋತ್ತರ ಕಲಾಪ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೇಳಿದ ವಿವಿಧ ಪ್ರಶ್ನೆಗಳಿಗೆ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿದ ಅವರು, ರಾಜ್ಯಾದ್ಯಂತ 136 ವ್ಹಿಲಿಂಗ್ ಪ್ರಕರಣಗಳನ್ನು ದಾಖಲಿಸಿ, ಈ ಪ್ರಕರಣಗಳಲ್ಲಿ 128 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2024ರಲ್ಲಿ 266 ಪ್ರಕರಣಗಳಲ್ಲಿ 179 ಜನರನ್ನು ಬಂಧಿಸಲಾಗಿದೆ. 2025ರಲ್ಲಿ ಈವರೆಗೆ 47 ಪ್ರಕರಣಗಳಲ್ಲಿ 30 ಜನರನ್ನು ಬಂಧಿಸಲಾಗಿದೆ ಎಂದರು.
ಮಾರಕಸ್ತ್ರಗಳನ್ನು ಹಿಡಿದು ಪುಂಡಾಟಿಕೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. 2023ರಲ್ಲಿ 68 ಪ್ರಕರಣ ದಾಖಲಿಸಿ, 147 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 66 ಪ್ರಕರಣಗಳಲ್ಲಿ 187 ಆರೋಪಿಗಳು , 2025ರ ಫೇಬ್ರವರಿವರೆಗೆ 26 ಕೇಸ್ ದಾಖಲಿಸಿ 86 ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಇಂತ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು, ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ 2023ರಲ್ಲಿ ವ್ಹಿಲಿಂಗ್ ಮಾಡಿದವರ ವಿರುದ್ಧ 242 ಪ್ರಕರಣಗಳನ್ನು ದಾಖಲಿಸಿ, 264 ಆರೋಪಿತರ ಪೈಕಿ 207 ಜನರನ್ನು ಬಂದಿಸಲಾಗಿದೆ. 2024ರಲ್ಲಿ 532 ಪ್ರಕರಣ ದಾಖಲಿಸಿ 479 ಬಂಧಿಸಿದ್ದೇವೆ. 2025ರಲ್ಲಿ ಈವರೆಗೆ 114 ಪ್ರಕರಣಗಳಲ್ಲಿ 102 ಜನರನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ. ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ. ಸಮಾಜಕ್ಕೂ ಸಹ ಇದು ಆಗುವುದಿಲ್ಲ. ಕಠಿಣವಾದ ಕ್ರಮಗಳನ್ನು ಜರುಗಿಸಲಾಗುತ್ತಿದೆ.
ಹೊಯ್ಸಳ ವಾಹನ, ಎಎಸ್ಐ ಗಳಿಗೆ ರಿವಲ್ವಾರ್ ಗಳನ್ನು ಸಹ ನೀಡಲಾಗಿದೆ. 24 ಗಂಟೆ ಬೀಟ್ ವ್ಯವಸ್ಥೆ ಇದೆ. ಬೆಂಗಳೂರು ನಗರದಲ್ಲಿ ಹೆಚ್ಚು ಫೋಕಸ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಈ ಹಿಂದೆಯೂ ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ನಿಯೋಗವನ್ನು ಲಂಡನ್ ಗೆ ಕರೆದೋಯ್ದಿದ್ದೆ. ಲಂಡನ್ ನಗರ ಮೆಟ್ರೋ ಪೊಲೀಸ್ ಜನರ ತುರ್ತು ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ, ಆ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಏರಿಯಾ ವಾರು ತಕ್ಷಣಕ್ಕೆ ಜನರಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಬೆಂಗಳೂರು ನಗರ ಪೊಲೀಸರಿಗೆ ಕಲ್ಪಿಸಲಾಗಿದೆ. ಏನೇ ಘಟನೆ ಆದರೂ ಸಹ ಪೊಲೀಸರಿಂದ 9 ನಿಮಿಷದಲ್ಲಿ ರೆಸ್ಪೋನ್ಸ್ ಸಿಗುತ್ತಿದೆ. ಇದು ದಿನದ 24 ಗಂಟೆಯೂ ನಡೆಯುವ ಪ್ರಕ್ರಿಯೆ.
ಮಹಿಳಾ ಸುರಕ್ಷತೆಗೆ ಪಿಂಕ್ ಹೊಯ್ಸಳ ಇದೆ. ಬೆಂಗಳೂರು ನಗರದಲ್ಲಿ ಶಾಂತಿ ಇದೆ. ಯಾವುದೇ ಘಟನೆಗಳದಾಗ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ.
ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ರೌಡಿಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. . 2022ರಲ್ಲಿ 44, 2023ರಲ್ಲಿ 53 ಪ್ರಕರಣ, 2024ರಲ್ಲಿ 34, 2025ರಲ್ಲಿ 8 ಪ್ರಕರಣ ದಾಖಲಿಸಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷದ ಮುಖಂಡರು ನಿರಾದರವಾಗಿ ಆರೋಪಿಸುತ್ತಿದ್ದಾರೆ. ಆ ರೀತಿಯ ಸಮಸ್ಯೆ ಉದ್ಭವಿಸಿಲ್ಲ. ರಾಜ್ಯದಾದ್ಯಂತ 2020ರಲ್ಲಿ 1315 ಕೊಲೆ ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 1340, 2022ರಲ್ಲಿ 1346, 2023ರಲ್ಲಿ 1294, 2024ರಲ್ಲಿ 1208 ಪ್ರಕರಣಗಳು, 2025 ಜನವರಿ ಇಂದ ಈವರೆಗೆ 100 ಪ್ರಕರಣಗಳು ವರದಿಯಗಿವೆ. ಕೊಲೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಅಪರಾಧ ಪ್ರಕಾರಣಗಳನ್ನನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆಯು ಹೆಚ್ಚು ಒತ್ತು ನೀಡಲಾಗುತ್ತಿದೆ. ಸೈಬರ್ ಘಟಕ ಆರಂಭಿಸಿ ಡಿಜಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಗಿದೆ. ಸೈಬರ್ ವಂಚಕರು ದಿನನಿತ್ಯ ಕೋಟ್ಯಾಂತರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗಳಿಂದ ದೋಚುತ್ತಿದ್ದಾರೆ. ಡೇಟಾ ಕದಿಯುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಮತ್ತ ಹಾಕಲು ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.
ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ‘ಎ, ಬಿ-ಖಾತಾ’ ಅಂದ್ರೆ ಏನು? ಪಡೆಯೋದು ಹೇಗೆ.?
ಮಹಾ ಕುಂಭಮೇಳದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಖಲಿಸ್ತಾನಿ ಉಗ್ರ ಅರೆಸ್ಟ್