ಬೆಂಗಳೂರು : ಯುವಕನೊಬ್ಬ ತಿಂಡಿ ಸೇವಿಸಲು ಕೆಫೆಗೆ ತೆರಳಿದ್ದಾ. ಈ ಬೆಳೆ ಇಡ್ಲಿ ಸಾಂಬಾರ್ ನಲ್ಲಿ ಜಿರಳೆ ಪತ್ತೆಯಾಗಿದ್ದು ಯುವಕ ಬಿಚ್ಚಿ ಬಿದ್ದಿದ್ದಾನೆ. ಈ ಕುರಿತು ಹೋಟೆಲ್ ಸಿಬ್ಬಂದಿಗಳಿಗೆ ಪ್ರಶ್ನಿಸಿದರೆ ಸಿಬ್ಬಂದಿಗಳು ಉಡಾಫೆ ಉತ್ತರ ನೀಡಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಬಳಿ ನಡೆದಿದೆ.
ಹೌದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ದಲ್ಲಿ ನಾರಾಯಣ ಹೃದಯಾಲಯದ ಆಸ್ಪತ್ರೆಯ ಬಳಿ ಕೆಫೆಯಲ್ಲಿ ಇಡ್ಲಿ ಸಾಂಬಾರ್ ಸೇವಿಸುವ ವೇಳೆ ಜಿರಳೆ ಪತ್ತೆಯಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಯುವಕ ದೂರು ನೀಡಿದ್ದಾನೆ. ಬೊಮ್ಮಸಂದ್ರ ಬಳಿ ಈ ಘಟನೆ ನಡೆದಿದ್ದು, ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಮಾಲೀಕರು ಹೋಟೆಲ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ವೇಳೆ ಪರಿಶೀಲನೆ ಬಳಿಕ ಪುರಸಭೆ ಅಧಿಕಾರಿಗಳಿಂದ ಸದ್ಯ ಹೋಟೆಲ್ಗೆ ಬೀಗ ಜಡಿಯಲಾಗಿದೆ.
ಬ್ರಾಹ್ಮಿನ್ಸ್ ಕೆಫೆಯ ಮಾಲೀಕ ಗೋಪಾಲ್ ಈ ಹೋಟೆಲ್ ನಡೆಸುತ್ತಿದ್ದು, ಇಡ್ಲಿ ಸಾಂಬಾರ್ ಸೇವಿಸುವ ಜಿರಳೆ ಇರುವುದು ಪತ್ತೆಯಾಗಿದೆ. ಆದರೆ ಈ ಬಗ್ಗೆ ಕೇಳಿದರೆ ಸಿಬ್ಬಂದಿಗಳಿಂದ ಉಡಾಫೆ ಉತ್ತರ ಕೇಳಿ ಬಂದಿದೆ ಹಾಗಾಗಿ ಇಡ್ಲಿ ಸಾಂಬರ್ ಸೇವಿಸುತ್ತಿದ್ದ ಯುವಕ ಪುರಸಭೆಗೆ ದೂರು ನೀಡಿದ್ದಾನೆ. ಹೋಟೆಲ್ ಗೆ ಬಂದ ಪುರಸಭೆ ಅಧಿಕಾರಿಗಳು ಕೆಫೆಗೆ ಬೀಗ ಜಡಿದಿದ್ದಾರೆ.