ಕೊಡಗು : ರಾಜ್ಯದಲ್ಲಿ ಮಾರ್ಚ್ ಆರಂಭದಲ್ಲೇ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಹೆಚ್ಚಾಗಿದ್ದು, ಜನರು ಈಗಿನಿಂದಲೇ ಮನೆಯಿಂದ ಹೊರಗಡೆ ಕಾಲಿಡೊದಕ್ಕೆ ಹೆದರುತ್ತಿದ್ದಾರೆ.ಇದರ ಮಧ್ಯ ಬೇಸಿಗೆ ಅವಧಿಗೂ ಮೊದಲೇ ಜೀವನದ ಕಾವೇರಿ ಇದೀಗ ಬತ್ತಿದೆ.
ಹೌದು ಕೊಡಗು ಜಿಲ್ಲೆಯಲ್ಲಿ ಉಗಮವಾಗುವ ಜೀವನದಿ ಕಾವೇರಿ ಇದೀಗ ಬೇಸಿಗೆ ಆರಂಭಕ್ಕು ಮೊದಲೇ ಬತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿತಾಣವಾದ ದುಬಾರೆಯಲ್ಲಿ ಮೋಟರ್ ಬೋಟ್ ಸಂಚಾರ ಸ್ಥಗಿತವಾಗಿದೆ. ಪ್ರವಾಸಿಗರಿಗೆ ರಾಫ್ಟಿಂಗ್ ಸಂಚಾರವನ್ನು ಇದೀಗ ಸ್ಥಗಿತಗೊಳಿಸಲಾಗಿದೆ ಏಪ್ರಿಲ್ ಮೇ ತಿಂಗಳಲ್ಲಿ ಕಾವೇರಿ ನದಿ ಪೂರ್ತಿಯಾಗಿ ಬತ್ತಿ ಹೋಗಲಿದೆ ಎನ್ನಲಾಗುತ್ತಿದೆ.
ಕಾವೇರಿ ನದಿ ಬತ್ತುವ ಹಿನ್ನೆಲೆ ಈ ಭಾಗದ ರೈತರಿಗೆ ಆತಂಕ ಶುರುವಾಗಿ. ಅಂತರ್ಜಲ ಕುಸಿತದಿಂದ ಕಾವೇರಿ ನದಿ ನಿಧಾನಕ್ಕೆ ಬತ್ತಿ ಹೋಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನ ಕಾವೇರಿ ನದಿ ಬತ್ತುತ್ತಿದೆ. ಕೊಡಗು ಜಿಲ್ಲೆಯಲ್ಲಿ ಬರಗಾಲ ಭೀತಿ ಎದುರಾಗಿದೆ. ಮಾರ್ಚ್ ಮೊದಲ ತಿಂಗಳಲ್ಲೇ ಈ ರೀತಿ ಪ್ರಶಸ್ತಿ ನಿರ್ಮಾಣವಾದರೆ ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯ ಜನರು ತೀವ್ರ ಬರಗಾಲ ಎದುರಿಸಲಿದ್ದಾರೆ ಎನ್ನಲಾಗಿದೆ.