ಬೆಂಗಳೂರು : 2024-25 ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಫೆಬ್ರವರಿ- 2025 ರ ಮಾಹೆಯ ಗೌರವಧನ ಪಾವತಿಸಲು ಕೊರತೆ ಆಗಿರುವ ಅನುದಾನ ಬಿಡುಗಡೆ ಮಾಡುವ ಬಗ್ಗೆ.
2024-25 ನೇ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಫೆಬ್ರವರಿ-2025 ರ ಮಾಹೆವರೆಗಿನ ಗೌರವಧನ ಪಾವತಿಗಾಗಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 12 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು ಫೆಬ್ರವರಿ-2025 ರ ಮಾಹೆಯ ಗೌರವಧನ ಪಾವತಿಸಲು ಕೊರತೆ ಆಗಿರುವ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿರುತ್ತಾರೆ. ಅದರಂತೆ ಅನುದಾನ ಬಿಡುಗಡೆ ಮಾಡಲು ಈ ಆದೇಶ
ಆದೇಶ ಸಂಖ್ಯೆ: ಕಾಶಿಇ/ಆಯವ್ಯಯ/ಉಗೌಧ/06/2024-25, ಬೆಂಗಳೂರು, ದಿನಾಂಕ: 05.03.2025.
2024-25 ನೇ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಪಾವತಿಸಲು ಲೆ ಶೀ 2202-03-103-2-01 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು 324 ಅತಿಥಿ ಉಪನ್ಯಾಸಕರ ಗೌರವಧನ ರಡಿಯಲ್ಲಿ ಫೆಬ್ರವರಿ-2025 ರ ಮಾಹೆಯ ಗೌರವಧನ ಪಾವತಿಸಲು ಕೊರತೆ ಆಗಿರುವ ರೂ.2,37,417/- (ಎರಡು ಲಕ್ಷದ ಮೂವತ್ತೇಳು ಸಾವಿರದ ನಾಲ್ಕು ನೂರು ಹದಿನೇಳು ಮಾತ್ರ) ಗಳನ್ನು ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವ ವಿವರಗಳಂತೆ ಸಂಬಂಧಪಟ್ಟ ಪ್ರಾಂಶುಪಾಲರುಗಳಿಗೆ ಬಿಡುಗಡೆ ಮಾಡಿ ನಿಯಮಾನುಸಾರ ಬಳಕೆ ಮಾಡಲು ಅನುಮತಿ ನೀಡಲಾಗಿದೆ.