ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬುದಾಗಿ ಹೈಕೋರ್ಟ್ ಗೆ ವಕೀಲ ಶಿವಾರೆಡ್ಡಿ ಎಂಬುವರು ರಿಟ್ ಪಿಟಿಷನ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದಂತ ಅವರು, ನಾನು ಚೌಡೇಶ್ವರಿ ತಾಯಿ ಆಣೆಗೂ ನಾನು ಅರಣ್ಯ ಇಲಾಖೆಯ ಒಂದು ಗುಂಟೆ ಜಮೀನು ಕೂಡ ಒತ್ತುವರಿ ಮಾಡಿಲ್ಲ. ನೀವು ಇಷ್ಟು ದಿನ ನೋಡಿದ್ದು ಬರೀ ಟ್ರಯಲ್. ಇನ್ಮೇಲೆ ಅಸಲಿ ಫಿಕ್ಚರ್ ಬರುತ್ತೆ ಎಂದರು.
ನಾನು ಶ್ರೀನಿವಾಸಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ನನ್ನ ಮೇಲಿನ ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಅದೆಲ್ಲ ಬರೀ ಟ್ರಯಲ್. ಸೋಮವಾರದ ನಂತ್ರ ಅಸಲಿ ಸಿನಿಮಾ ಬರುತ್ತದೆ ಎಂದರು.
ನಾನು ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಗ್ರಾಮದ ಸರ್ವೇ ನಂ.1 ಮತ್ತು 2ರಲ್ಲಿ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ಬಾರಿ ಜಮೀನಿನ ಜಂಟಿ ಸರ್ವೆಯಾಗಿದೆ. ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಷಿಯಾಗಿದ್ದೇನೆ. ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದಂತ ಅರ್ಜಿದಾರರಿಗೆ ದೇವರು ಒಳ್ಳೇದು ಮಾಡಲಿ ಎಂಬುದಾಗಿ ಹೇಳಿದರು.
‘ನಂದಿನಿ ಹಾಲಿನ ದರ’ ಏರಿಕೆ ಮಾಡೇ ಮಾಡ್ತೀವಿ: ಸಚಿವ ವೆಂಕಟೇಶ್ | Nandini Milk Price Hike
ವಿಶ್ವದ ಅತಿ ಉದ್ದದ ರೋಪ್ ವೇ ಕೇದಾರನಾಥದಲ್ಲಿ ನಿರ್ಮಾಣ: 4000 ಕೋಟಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ