ಯಾದಗಿರಿ : ಸದ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕುರಿತು ಬಾರಿ ಚರ್ಚೆ ನಡೆಯುತ್ತಿದ್ದು ಒಂದು ಕಡೆ ಟಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆಂದು ಹಲವರು ಭವಿಷ್ಯ ನುಡಿಸಿದರೆ ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಇದರ ಮಧ್ಯ ನೊಣವಿನಕೆರೆಯ ಶಿವಯೋಗೇಶ್ವರ ಶಿವಾಚಾರ್ಯರು ಡಿಕೆ ಶಿವಕುಮಾರ್ ಸಿಎಂ ಆಗುವುದು ಎಲ್ಲರ ಸಂಕಲ್ಪವಾಗಿದೆ ಎಂದು ಸ್ಪೋಟಕವಾದ ಭವಿಷ್ಯ ನುಡಿದಿದ್ದಾರೆ.
ಯಾದಗಿರಿಯ ಅಬ್ಬೆತುಮಕೂರಲ್ಲಿ ಮಾತನಾಡಿದ ಅವರು, ಡಿಕೆ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದಾರೆ. ನೊಣವಿನಕೆರೆಯ ಸೋಮ್ಮೆಕಟ್ಟೆ ಶಿವಯೋಗೇಶ್ವರ ಶಿವಾಚಾರ್ಯರು ಈ ಒಂದು ಭವಿಷ್ಯ ನುಡಿದಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ಎಲ್ಲರ ಆಸೆಯಾಗಿದೆ. ರೈತರು ಸದ್ಭಕ್ತರು ವರ್ತಕರು ಸೇರಿದಂತೆ ಎಲ್ಲರ ಆಶಯ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ಇದೆ.
ಡಿಕೆ ಶಿವಕುಮಾರ್ ಸಿಎಂ ಆಗಲು ಯೋಗ್ಯವಾದ ವ್ಯಕ್ತಿ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಸಂಕಲ್ಪವಿದೆ. ಡಿಕೆ ಸಿಎಂ ಆಗಬೇಕೆಂಬುದು ನಮ್ಮ ಮಠದ ಆಶೀರ್ವಾದವೂ ಇದೆ. ಒಂದು ದಿನ ಡಿಕೆಸಿಎಂ ಆಗುತ್ತಾರೆಂದು ನಾವು ಹರಸುತ್ತಾ ಇದ್ದೇವೆ. ಡಿಕೆಶಿ ಸಿಎಂ ಆಗುವುದು ದಿನಗಳಲ್ಲಿ ಹೇಳೋಕೆ ಆಗುವುದಿಲ್ಲ. ಡಿಕೆಶಿ ಸಿಎಂ ಆಗುವುದು ಎಲ್ಲರ ಸಂಕಲ್ಪವಾಗಿದೆ ಎಂದು ಯಾದಗಿರಿಯ ಅಬ್ಬೆತುಮಕೂರಲ್ಲಿ ನೊಣವಿನಕೆರೆಯ ಸ್ವಾಮೀಜಿ ಭವಿಷ್ಯ ನುಡಿದರು.