ರಾಯಚೂರು: ಕಾಮಗಾರಿ ಫಲಕದ ಕಾರಣಕ್ಕಾಗಿ ಉಂಟಾದಂತ ಜಗಳವು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವಂತ ಘಟನೆ ರಾಯಚೂರಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿನ ಮಡಗು ಗ್ರಾಮದಲ್ಲಿ ಕಾಮಗಾರಿ ಫಲಕ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದೆ. ಈ ಜಗಳದಲ್ಲಿ ಭೀಮಪ್ಪ (45) ಎಂಬುವರು ಕೊಲೆಯಾಗಿರುವುದಾಗಿ ಹೇಳಲಾಗುತ್ತಿದೆ. ಈ ಘಟನೆಯಲ್ಲಿ ಮತ್ತೋರ್ವ ರಮೇಶ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂದಹಾಗೇ ಮಲ್ಲಿನ ಮಡಗು ಗ್ರಾಮದ ರಸ್ತೆ ರಿಪೇರಿ ಕಾಮಗಾರಿ ವೇಳೆಯಲ್ಲಿ ಯಂಕೋಬ ಎಂಬುವರಿಗೆ ವಿರೇಶ್ ಎಂಬಾತ ಕಿರಿಕಿರಿ ಮಾಡುತ್ತಿದ್ದನು. ಈ ಹಿನ್ನಲೆಯಲ್ಲಿ ಯಂಕೋಬ, ಭೀಮಪ್ಪ ಸೇರಿಕೊಂಡು ವೀರೇಶ್ ಗೆ ಎಚ್ಚರಿಕೆ ನೀಡಿದ್ದರು.
ಈ ಕಾರಣಕ್ಕಾಗಿಯೇ ಅದೇ ರಾತ್ರಿ ವೀರೇಶ್ ಗುಂಪು ಕಟ್ಟಿಕೊಂಡು ಬಂದು, ಯಂಕೋಬಾ ಹಾಗೂ ಭೀಮಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಭೀಮಪ್ಪ ಸಾವನ್ನಪ್ಪಿದ್ದರೇ, ಯಂಕೋಬ, ರಮೇಶ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ವೀರೇಶ್ ಸೇರಿದಂತೆ 22 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
BREAKING: ಸದ್ಯಕ್ಕೆ ಹೊಸ ಜಿಲ್ಲೆಗಳ ಘೋಷಣೆ ಇಲ್ಲ: ಸಚಿವ ಕೃಷ್ಣ ಬೈರೇಗೌಡ