ಬೆಂಗಳೂರು: ಸೇವೆಯಿದಂದ ವಜಾಗೊಂಡ ಉದ್ಯೋಗಿ ಕೂಡ ವಿಶೇಷ ರಜೆಗಳ ನಗದೀಕರಣಕ್ಕೆ ಅರ್ಹರಾಗಿರುತ್ತಾರೆ ಎಂಬುದಾಗಿ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
ಈ ಸಂಬಂಧ ವಿಶೇಷ ರಜೆ ನಗದೀಕರಣ ನಿರಾಕರಿಸಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕಂಪ್ಲಿಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಕ್ರಮವನ್ನು ಪ್ರಶ್ನಿಸಿ ಬ್ಯಾಂಕಿನ ಮಾಜಿ ಸಹಾಯಕ ವ್ಯವಸ್ಥಾಪಕ ಜಿ.ಲಿಂಗನಗೌಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಲಿಂಗನಗೌಡ ಅವರ ಅರ್ಜಿಯನ್ನು ಪುರಸ್ಕರಿಸಿದ್ದಂತ ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು, ಸೇವೆಯಿಂದ ವಜಾಗೊಂಡ ಉದ್ಯೋಗಿ ಕೂಡ ವಿಶೇಷ ರಜೆಗಳ ನಗದೀಕರಣಕ್ಕೆ ಅರ್ಹರಾಗಿರುತ್ತಾರೆ ಎಂಬುದಾಗಿ ತೀರ್ಪು ನೀಡಿದ್ದಾರೆ.
ಇನ್ನೂ ಅರ್ಜಿದಾರರು ತಮ್ಮ ಸೇವಾವಧಿಯಲ್ಲಿ ಸಂಗ್ರಹಿಸಿರುವ 220 ದಿನಗಳ ವಿಶೇಷ ರಜೆಗೆ ಅರ್ಹರು ಎಂಬುದಾಗಿಯೂ ನ್ಯಾಯಪೀಠ ತಿಳಿಸಿದೆ. ಅಲ್ಲದೇ ರಜೆಯ ನಗದೀಕರಣ ಕಾನೂನಿನಡಿ ಮಾತ್ರವಲ್ಲದೇ ಸಂವಿಧಾನದ ಅಡಿಯಲ್ಲಿಯೂ ಉದ್ಯೋಗಿಯೊಬ್ಬನ ಹಕ್ಕು ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
ನೂತನ ವಿವಿ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವವರು ಕೇಂದ್ರದಿಂದ ಹಣ ಕೊಡಿಸಲಿ: ಡಿಸಿಎಂ ಡಿಕೆಶಿ
‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ ಜಸ್ಟ್ ‘500 ರೂ’ ಪ್ರೀಮಿಯಂ ಕಟ್ಟಿದರೆ ’10 ಲಕ್ಷ ವಿಮೆ’ ಸಿಗುತ್ತೆ