ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡದ ಹಲವು ಕಲಾವಿದರು ಭಾಗಿಯಾಗದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನಗೊಂಡಿದ್ದು, ನಮಗೆ ನಿಮ್ಮ ನಟ್ಟು ಬೋಲ್ಟ್ ಎಲ್ಲಿ ಹೇಗೆ ಸರಿ ಮಾಡಬೇಕೆನ್ನುವುದು ಗೊತ್ತಿದೆ ಎಂದು ಹೇಳಿಕೆ ನೀಡಿದರು. ಇದೀಗ ಈ ಒಂದು ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಟೀಕೆ ಮಾಡಲಿ ಅಂತಾನೆ ನಾನು ಆ ಹೇಳಿಕೆ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೀಕೆ ಮಾಡಲಿ ಎಂದೆ ನಾನು ಆ ಹೇಳಿಕೆ ನೀಡಿದ್ದು, ಚಿತ್ರರಂಗದವರಿಗೆ ಎಷ್ಟು ಸಹಾಯ ಮಾಡಿದ್ದೇನೆ ಎಂದು ನನಗೂ ಮತ್ತು ಅವರಿಗೂ ಗೊತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಅವರು ಬೆಳೆಯಲಿ ಅಂತ ಫಿಲಂ ಫೆಸ್ಟಿವಲ್ ಮಾಡುತ್ತಿರುವುದು. ಅವರೇ ಪ್ರಚಾರ ಮಾಡಬೇಕು ನಾವು ಮಾಡುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಟಿ.ಎಸ್ ನಾಗಭರಣ ಅವರಿಗೆ ಅಹ್ವಾನ ಕೊಡದೆ ಇರಬಹುದು. ಯಾವ ಇಲಾಖೆಯದ್ದು ತಪ್ಪಿದೆಯೋ ಗೊತ್ತಿಲ್ಲ. ಅದು ಅವರ ಕಾರ್ಯಕ್ರಮ ಟೀಕೆ ಮಾಡೋದು ಗೊತ್ತಿತ್ತು ಟೀಕೆ ಮಾಡಿದ್ದು ಎಚ್ಚರಿಕೆಗೆ ಅಷ್ಟೇ. ನಾವು ತಪ್ಪು ಮಾಡಿದ್ರೆ ಸರಿ ಮಾಡಿಕೊಳ್ಳೋಣ ಅವರದ್ದು ತಪ್ಪಿದ್ದರೆ ಅವರು ಸರಿ ಮಾಡಿಕೊಳ್ಳಲಿ. ಚಿತ್ರರಂಗದವರಿಗೆ ಸರ್ಕಾರನು ಬೇಕು ಜನರು ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.