ಬೆಂಗಳೂರು : ಇಡ್ಲಿ, ಬಟಾಣಿ ಕಲ್ಲಂಗಡಿ ಬಳಿಕ ಇದೀಗ ಬೆಲ್ಲದ ಸರದಿ. ಸಿಹಿಪ್ರಿಯರ ಇಷ್ಟದ ಬೆಲ್ಲದಲ್ಲೂ ಇದೀಗ ವಿಷಕಾರಿ ಅಂಶ ಇದೀಗ ಪತ್ತೆಯಾಗಿದೆ. ಹೌದು ಆಹಾರ ಇಲಾಖೆಯು ಬೆಳೆದ ಸ್ಯಾಂಪಲ್ಸ್ ಗಳನ್ನು ಲ್ಯಾಬ್ ಗೆ ಕಳುಹಿಸಿ ಪ್ರಯೋಗಗಾಲಯದಲ್ಲಿ ಟೆಸ್ಟ್ ಮಾಡಿಸಿದಾಗ, ವರದಿಯಲ್ಲಿ ಬೆಲ್ಲ ಅಸುರಕ್ಷಿತ ಅನ್ನೋದು ಬಯಲಾಗಿದೆ.
ಫೆಬ್ರುವರಿಯಲ್ಲಿ ಲ್ಯಾಬ್ ಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಒಟ್ಟು 600ಕ್ಕೂ ಹೆಚ್ಚು ಸ್ಯಾಂಪಲ್ಸ್ ಗಳನ್ನು ಈ ವೇಳೆ ಪರೀಕ್ಷಿಸಲಾಗಿತ್ತು. ಈ ವೇಳೆ 200ಕ್ಕೂ ಹೆಚ್ಚು ಬೆಲ್ಲ ಅಸುರಕ್ಷಿತ ಎಂದು ವರದಿಯಲ್ಲಿ ದೃಢವಾಗಿದೆ. ಬೆಲ್ಲದಲ್ಲಿ ಸಲ್ಫೈರ್ ಡೈಆಕ್ಸೈಡ್ ರಾಸಾಯನಿಕ ಬಳಕೆ ಮಾಡುತ್ತಿರುವ ಪತ್ತೆಯಾಗಿದೆ.
ಇಂತಹ ಬೆಲ್ಲ ಸೇವನೆಯಿಂದ ಮೂಳೆ, ನಗರಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ. ಸಲ್ಫೈರ್ ಡೈಆಕ್ಸೈಡ್ ನಿಂದ ಮನುಷ್ಯನಲ್ಲಿ ನಿಶಕ್ತಿ ಕಾಣಿಸಿಕೊಳ್ಳುತ್ತದೆ. ಮಂಡಿ ನೋವು, ಸೊಂಟ ಮತ್ತು ಬೆನ್ನು ನೋವು ಹೆಚ್ಚಾಗುತ್ತದೆ. ಅಲ್ಲದೇ ಮನುಷನ ದೇಹದಲ್ಲಿ ವಿವಿಧ ಆರೋಗ್ಯದ ಸಮಸ್ಯೆ ಕಂಡು ಬರುತ್ತದೆ. ಈ ಬೆಲ್ಲ ತಿಂದರೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಬೆಲ್ಲ ತಯ್ಯಾರಿಸುವ ವೇಳೆ ಸಲ್ಫರ್ ಡೈಯಾಕ್ಸೈಡ್ ಬಳಸುವುದರಿಂದ ಗೋಲ್ಡನ್ ಕಲರ್ ಗೆ ಬೆಲ್ಲ ತಿರುಗುತ್ತದೆ. ಬ್ರೌನ್ ಕಲರ್ ಹೋಗಿ ಗೋಲ್ಡನ್ ಕಲರ್ ಬರುತ್ತದೆ. ಹಾಗಾಗಿ ಬೆಲ್ಲದಲ್ಲಿ ರಾಸಾಯನಿಕ ಬಳಸುತ್ತಿರುವುದು ಪತ್ತೆಯಾಗಿದೆ. ಆಹಾರ ಇಲಾಖೆ ಲ್ಯಾಬ್ನಲ್ಲಿ ಇದೀಗ ವರದಿಯಲ್ಲಿ ಶಾಕಿಂಗ್ ಅಂಶ ಬಯಲಾಗಿದೆ. 8 ಆಹಾರಗಳು ಅಸುರಕ್ಷಿತ ಅಂತ ವರದಿಯಲ್ಲಿ ಬಹಿರಂಗವಾಗಿದೆ.