ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ. ಅದನ್ನು ತಪ್ಪಿಸೋಕೆ ಯಾರಿಂದಾನು ಸಾಧ್ಯವಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದರು. ಇದೀಗ ಈ ಒಂದು ಹೇಳಿಕೆ ನಡುವೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಕಂಡುಬಂದಿದ್ದು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ.
ಹೌದು ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ಧು, ಭಾರಿ ಕುತೂಹಲ ಮೂಡಿಸಿದೆ. ಖರ್ಗೆ ಭೇಟಿ ಬಳಿಕ ಮಾತನಾಡಿದ ಅವರು, ನಾನು ಖರ್ಗೆಯವರನ್ನು ಭೇಟಿ ಮಾಡದೆ ಬಿಜೆಪಿ ಆಫೀಸ್ ಗೆ hoglab? ಖರ್ಗೆ ಕಾಂಗ್ರೆಸ್ ಅಧ್ಯಕ್ಷರು ಅವರು ರಾಜ್ಯಕ್ಕೆ ಬಂದಾಗ ನಾನು ಅವರಿಗೆ ಗೌರವ ಕೊಡದೆ ಇನ್ಯಾರಿಗೆ ಕೊಡೋಕೆ ಆಗುತ್ತೆ? ಇದು ನಮ್ಮ ಕರ್ತವ್ಯ ಪಕ್ಷದ ವಿಚಾರ ಹಾಗೂ ಹೊಸ ಕಾಂಗ್ರೆಸ್ ಭವನ ಉದ್ಘಾಟನೆ ವಿಚಾರವಾಗಿ ದಿನಾಂಕ ನೀಡುವ ಕುರಿತು ಮಾತುಕತೆ ಆಗಿದೆ ಎಂದು ತಿಳಿಸಿದರು.