ಕಲಬುರ್ಗಿ : ಇತ್ತೀಚಿಗೆ ಹೆಂಡತಿಯರ ಕಾಟಕ್ಕೆ ಗಂಡಂದಿರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇಡೀ ದೇಶದಾದ್ಯಂತ ಭಾರಿ ಸುದ್ದಿಯಾಗಿತ್ತು.ಇದೀಗ ಕಲ್ಬುರ್ಗಿಯಲ್ಲಿ ಪತ್ನಿಯ ಕಾಟಕ್ಕೆ ಬೇಸತ್ತು ಪತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ನಗರದ ಮಹದೇವನಗರದಲ್ಲಿ ನಡೆದಿದೆ.
ಹೌದು ಮನೇಯಲ್ಲಿ ನೇಣು ಬಿಗಿದುಕೊಂಡು ರಾಕೇಶ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾತೆತ್ತಿದರೆ ಪತ್ನಿ ಕಂಪ್ಲೇಂಟ್ ಕೊಡುತ್ತೇನೆ ಎಂದು ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಲಬುರ್ಗಿ ಮಹದೇವನಗರದಲ್ಲಿ ಈ ಒಂದು ಘಟನೆ ನಡೆದಿದೆ.
6 ತಿಂಗಳ ಹಿಂದೆ ರಾಕೇಶ್ ಹಾಗೂ ಮೇಘನಾ ಮದುವೆಯಾಗಿತ್ತು. ಮನೆ ಕೆಲಸ ಸೇರಿ ಸಣ್ಣ ಸಣ್ಣ ವಿಚಾರಕ್ಕೆ ಮೇಘನಾ ಕಿರಿಕ್ ಮಾಡುತ್ತಿದ್ದಳು. ಮನೆ ಒರೆಸುವ, ಮನೆ ಕೆಲಸ ಮಾಡಲು ಕಾಟ ನೀಡಲಾಗುತ್ತಿತ್ತು.ಮನೆ ಕೆಲಸ ಮಾಡದಿದ್ದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತೇನೆ ಎಂದು ಪತ್ನಿ ಹೆದರಿಸುತ್ತಿದ್ದಳು.
ಒಂದು ವೇಳೆ ಮಾತು ಕೇಳದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಮೇಘನಾ ಹೆದರಿಸುತ್ತಿದ್ದಳು. ಇದರಿಂದ ಮನನೊಂದು ರಾಕೇಶ್ ಶರಣಾಗಿದ್ದಾನೆ ಎಂದು ರಾಕೇಶ್ ಪೋಷಕರು ಆರೋಪಿಸಿದ್ದಾರೆ. ಸದ್ಯ ಮೇಘನಾ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ.