ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಬಿಜೆಪಿ ಡಿಕೆ ಶಿವಕುಮಾರ್ ಅವರು, ಕರ್ನಾಟಕದ ಪರ ಧ್ವನಿ ಎತ್ತದ ಚಿತ್ರರಂಗದ ಕೆಲವು ನಟ ನಟಿಯರ ನಟ್ಟು ಬೋಟ್ ಟೈಟ್ ಮಾಡಬೇಕಾಗಿದೆ ಎಂದು ಹೇಳಿಕೆ ನೀಡಿದರು ಇದೇ ವಿಚಾರವಾಗಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೌದು ಚಿತ್ರತಂಗದವರ ನಟ್ಟು ಬೋಲ್ ಟೈಟ್ ಮಾಡಲೇಬೇಕು ಎಂದು ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚಿತ್ರನಟರ ನಟ್ಟು ಬೋಲ್ಟ್ ಟೈಟ್ ಮಾಡಬೇಕೆಂಬ ಹೇಳಿಕೆ ವಿಚಾರವಾಗಿ ಕನ್ನಡ ಚಿತ್ರರಂಗದ ಕೆಲ ವಿಧಾನದಲ್ಲಿ ಧಿಮಾಕು ಹೆಚ್ಚಾಗಿದೆ ಅಂತವರಿಗೆ ಸರ್ಕಾರ ನಟ್ಟು ಬೋಲ್ಟ್ ಟೈಟ್ ಮಾಡಲೇಬೇಕು ಯಾರು ಕರೆಕ್ಟ್ ಇರುತ್ತಾರೋ ಅವರಿಗೆ ಅದು ಎಫೆಕ್ಟ್ ಆಗುವುದಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಯಾವುದನ್ನು ಸುಮ್ಮನೆ ಹೇಳುವುದಿಲ್ಲ. ಏನಾದರೂ ಡಿಕೆ ಶಿವಕುಮಾರ್ ಹೇಳಿದ್ದಾರೆ ಅಂದರೆ ಅದು 100 ಪರ್ಸೆಂಟ್ ಸರಿ ಇರುತ್ತದೆ ಎಂದರು.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಸುಮ್ಮನೆ ಧರಣಿ ಮಾಡುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಯಾರನ್ನು ಅವಮಾನ ಮಾಡಿ ಮಾತನಾಡುವುದಿಲ್ಲ. ಚಿತ್ರರಂಗದ ಕೆಲ ಕಲಾವಿದರು ದುರಹಂಕಾರದಲ್ಲಿ ಮರೆಯುತ್ತಿದ್ದಾರೆ. ನಟರು ಆಕಾಶದಿಂದ ಬಂದವರಂತೆ ಆಡುತ್ತಾರೆ. ನಟ್ಟು ಬೋಲ್ಟ್ ಟೈಟ್ ಮಾಡಲೇಬೇಕು ಅಂತ ಹೇಳಿರುವುದು ಸರಿ ಎಂದು ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಆರ್ ಅಶೋಕಗೆ ಏಡ್ಸ್ ಇಂಜೆಕ್ಷನ್ ಕೊಟ್ಟು ಸಾಯಿಸಲು ಹೊರಟಿದ್ದರು. ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧ ಇದೆ ವೇಳೆ ಸೋಮಶೇಖರ್ ವಾಗ್ದಾಳಿ ನಡೆಸಿದರು.ಆರ್ ಅಶೋಕಗೆ ಧಮ್ ಇಲ್ವಾ ಅದನ್ನ ಟೈಟ್ ಮಾಡಲು? ಅಂತವರ ನಟ್ಟು ಬೋಲ್ಡ್ ಟೈಟ್ ಮಾಡಲಿ ಏಡ್ಸ್ ಇಂಜೆಕ್ಷನ್ ಚುಚ್ಚುವ ಹೋದವರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು.