ಮೈಸೂರು: ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ವ್ಯಕ್ತಿಯೊಬ್ಬ ಬೆಂಕಿ ಇಟ್ಟಿರುವಂತ ಘಟನೆ ಮೈಸೂರಿನ ಅಗ್ರಹಾರದ ಮಧುವನ ಬಡಾವಣೆಯಲ್ಲಿ ನಡೆದಿದೆ. ಕಿಡಿಗೇಡಿಯ ಕೃತ್ಯದಿಂದ ಇಡೀ ಮನೆಯೇ ಸುಟ್ಟು ಹೋಗಿರುವಂತ ಘಟನೆ ನಡೆದಿದೆ.
ಮೈಸೂರಿನ ಮಧುವನ ಬಡಾವಣೆಯಲ್ಲಿ ಗುರು ಎಂಬಾತ ಮನೆಯವರೊಂದಿಗೆ ಕುಡಿದ ನಶೆಯಲ್ಲಿ ಜಗಳ ಆಡಿದ್ದಾನೆ. ಇದೇ ಕಾರಣದಿಂದ ಬೀಡಿ ಸೇದುತ್ತಿದ್ದಂತ ಆತ, ಅದನ್ನು ಬೆಡ್ ಶೀಟ್ ಮೇಲೆ ಇಟ್ಟು ಆಚೆ ಬಂದಿದ್ದಾನೆ.
ಬೀಡಿಯ ಕಿಡಿಯಿಂದ ಬೆಡ್ ಶೀಟ್ ಹಾಗೂ ಹಾಸಿಗೆಗೆ ಹೊತ್ತಿಕೊಂಡ ಬೆಂಕಿ, ಆ ಬಳಿಕ ಇಡೀ ಮನೆಗೆ ವ್ಯಾಪಿಸಿದೆ. ಬೆಂಕಿ ನಂದಿಸಲು ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಮನೆಗೆ ವ್ಯಾಪಿಸಿ ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆಯಿಂದಾಗಿ ಮನೆಯಲ್ಲಿದ್ದಂತ ಬಟ್ಟೆ, ದವಸ, ಧಾನ್ಯ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹೋಗಿದ್ದಾವೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಾಖಂಡದಲ್ಲಿ ಹಿಮಪಾತ: ನಾಲ್ವರು ಸಾವು, 50 ಜನರ ರಕ್ಷಣೆ, 5 ಕಾರ್ಮಿಕರು ನಾಪತ್ತೆ | Uttarakhand Avalanche
BIG NEWS: ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ: ಸಿದ್ಧರಾಮಯ್ಯ ಹೊಳಿಮಠ ಸ್ಪೋಟಕ ಭವಿಷ್ಯ