ಬೆಂಗಳೂರು: ನನಗೂ ಅಣ್ಣ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಆಸೆ ಇದೆ. ಆದರೇ ಅದಕ್ಕೆ ಕಾಲ ಕೂಡಿ ಬರಬೇಕಲ್ವ ಎಂಬುದಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದರಲ್ಲಿ ಯಾವುದೇ ಹೊಸತು ಇಲ್ಲ. ಅವರು ನಿರಂತರವಾಗಿ ಭೇಟಿ ಮಾಡುತ್ತಲೇ ಇರುತ್ತಾರೆ. ಅವರ ಮುಂದೆ ಡಿಮ್ಯಾಂಡ್ ಇದೋದಕ್ಕೆ ಏನಿದೆ. ಅವರನ್ನು ಪಾರ್ಟಿಯೇ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂಬುದಾಗಿ ತಿಳಿಸಿದರು.
ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದಾರೆ. ಸಿಎಂ ಸ್ಥಾನ ಬೇಕು ಅಂತ ಅವರನ್ನು ಚೇರ್ ನಿಂದ ಎಳೆದು ಕೂರಿಸೋದಕ್ಕೆ ಆಗುತ್ತಾ? ಎಂಬುದಾಗಿ ಪ್ರಶ್ನಿಸಿದರು.
ದೆಹಲಿಗೆ ಹೋದಾಗಲೆಲ್ಲ ಹೈಕಮಾಂಡ್ ಭೇಟಿ ಸಾಮಾನ್ಯವೇ ಆಗಿದೆ. ಅವರ ಜೊತೆಗೆ ಪಕ್ಷದ ಅಧ್ಯಕ್ಷರಾಗಿರುವಂತ ಡಿ.ಕೆ ಶಿವಕುಮಾರ್ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
BIG NEWS: ಮಾರ್ಚ್.22ರಂದು ‘ಕರ್ನಾಟಕ ಬಂದ್’: ‘7, 8, 9ನೇ ತರಗತಿ ಪರೀಕ್ಷೆ’ ಮುಂಡೂಡಿಕೆ ಇಲ್ಲ- ಸಚಿವ ಮಧು ಬಂಗಾರಪ್ಪ