ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ತೊರೆಯುತ್ತಾರೆ ಎಂದು ಬಿಜೆಪಿ ಹಲವು ನಾಯಕರು ಒಂದು ಕಡೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಸಿಎಂ ಬದಲಾವಣೆ ಕುರಿತು ಕಾಂಗ್ರೆಸಿನಲ್ಲೇ ಹಲವು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ಮಾಜಿ ಸಂಸದ ಡಿಕೆ ಸುರೇಶ್ ನನಗೂ ಒಂದು ಕನಸಿದೆ ಅಣ್ಣ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಒಂದು ಕನಸು ಇದೆ ನಮ್ಮಣ್ಣ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಸೀಟ್ ಕಾಲಿ ಇಲ್ಲ ಸದ್ಯ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಇದ್ದಾರೆ. ಸೀಟ್ ಖಾಲಿ ಇದ್ದಾಗ ಮಾತ್ರ ಪ್ರಯತ್ನ ಮಾಡಬೇಕು. ಬಲವಂತವಾಗಿ ಎಳೆದು ಸೀಟ್ ಮೇಲೆ ಕೂರಿಸಲು ಆಗಲ್ಲ. ನಮಗೆ ನಂಬಿಕೆ ಇದೆ ನಂಬಿಕೆ ಮೇಲೆ ಜೀವನ ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದರು.