ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕುರಿಕುಪ್ಪ ಬಳಿ 2400 ಸತ್ತ ಕೋಳಿ ಮಾದರಿಯಲ್ಲಿ ಹಕ್ಕಿ ಜ್ವರ ದೃಢವಾಗಿದೆ. ಪ್ರಯೋಗಾಲಯದಲ್ಲಿ ಸತ್ತ ಕೋಳಿಗಳ ಮಾದರಿಯಲ್ಲಿ ಹಕ್ಕಿ ಜ್ವರ ಇದೀಗ ದೃಢವಾಗಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದ ಭೂಪಾಲ್ನ ಲ್ಯಾಬ್ ನೀಡಿದ ವರದಿಯಲ್ಲಿ ಹಕ್ಕಿ ಜ್ವರ ಇರುವುದು ದೃಢವಾಗಿದೆ.
ಹಕ್ಕಿ ಜ್ವರ ದೃಢವಾದ ಹಿನ್ನೆಲೆಯಲ್ಲಿ ಬಳ್ಳಾರಿಯ ಜನ ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಕರ್ನಾಟಕ ಪಕ್ಕದ ರಾಜ್ಯಗಳದ ಆಂಧ್ರಪ್ರದೇಶ ತೆಲಂಗಾಣದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸೂಚನೆ ನೀಡಿದೆ. ಕುರಿಕೊಪ್ಪ ಸುತ್ತಲೂ ಒಂದು ಕಿಲೋಮೀಟರ್ ಅಪಾಯಕಾರಿಯ ವಲಯ ಎಂದು ಘೋಷಣೆ ಮಾಡಲಾಗಿದೆ. ತೋರಣಗಲ್ಲು, ಕುರೆಕೊಪ್ಪ, ವಡ್ಡು, ತಾಳೂರ, ಬಸಾಪುರ, ದರೋಜಿ ಹಾಗು ದೇವಲಾಪುರ ಗ್ರಾಮವನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.