ಶಿವಮೊಗ್ಗ: ನಾಳೆ ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಅ.ರಾ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾಗರದ ಗಾಂಧಿ ಮೈದಾನದಲ್ಲಿ ಕನ್ನಡದ ಡಿಂಡಿಮ ಮೊಳಗಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ ಸ್ವಾಮಿ ಅವರು, ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್.1ರ ನಾಳೆ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದರು.
ನಾಳೆ ಬೆಳಿಗ್ಗೆ 9 ಗಂಟೆಗೆ ಸಾಗರ ಉಪವಿಭಾಗಾಧಿಕಾರಿ ಯತೀಶ್.ಆರ್ ಅವರು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಅಲ್ಲದೇ ನಾಡಧ್ವಜವನ್ನು ಸಾಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಬಿಎಲ್ ಶಿವಪ್ರಶಾಕ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ 9.15ರಿಂದ ಸಾಗರ ನಗರಸಭೆಯ ಮುಂಭಾಗದಲ್ಲಿರುವಂತ ಡಾ.ಬಿಆರ್ ಅಂಬೇಡ್ಕರ್, ಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಲಿದೆ. ಈ ಮೆರವಣಿಗೆಗೆ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಚಾಲನೆ ನೀಡಲಿದ್ದಾರೆ. ನಗರಸಭೆ ಸದಸ್ಯರಾದಂತ ಅರವಿಂದ ಎಸಿ, ದಲಿತ ಸಂಘರ್ಷ ಸಮಿತಿ ಸಾಗರ ತಾಲ್ಲೂಕು ಸಂಚಾಲಕ ರೇವಪ್ಪ ಕೆ ಹೊಸಕೊಪ್ಪ ಸೇರಿದಂತೆ ಇತರರು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಾಳೆ ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾಗರ ಶಾಸಕ, ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವಂತ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ವೇಳೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದಂತ ಡಿ.ಮಂಜುನಾಥ ಆಶಯ ನುಡಿಯನ್ನು ನುಡಿಯಲಿದ್ದಾರೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ವೇಳೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಮತ್ರಿ ವೀರೇಂದ್ರ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸಾಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿಆರ್ ಜಯಂತ್, ಡಿವೈಎಸ್ಪಿ ಗೋಪಾಲಕೃಷ್ಣ ತಿ ನಾಯ್ಕ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಬಿಇಓ ಪರಶುರಾಮಪ್ಪ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಸೇರಿದಂತೆ ಇತರರು ಇರಲಿದ್ದಾರೆ ಎಂದರು.
ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಸ್ವಾಗತವನ್ನು ವಿಟಿ ಸ್ವಾಮಿ, ನಿರೂಪಣೆಯನ್ನು ದೀಪಕ್ ಸಾಗರ್, ನಿರ್ವಹಣೆಯನ್ನು ಜಿ ನಾಗೇಶ್, ಲೋಕೇಶ್ ಕುಮಾರ್, ಡಾ.ಪ್ರಸನ್ನ.ಟಿ, ವಂದನಾರ್ಪಣೆಯನ್ನು ನಾರಾಯಣಮೂರ್ತಿ ಕಾನಗೋಡು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ನೇಹಾ ಸಾಗರ ಮಹಿಳಾ ಮಂಡಳಿಯಿಂದ ಭಾವಗೀತೆ, ಸಹನಾ ಭಟ್ ಅವರಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ತಿಳಿಸಿದರು.
ಬೆಳಿಗ್ಗೆ 11.45ರಿಂದ ಗೋಷ್ಠಿ-1 ಆರಂಭಗೊಳ್ಳಲಿದೆ. ಇದರ ಅಧ್ಯಕ್ಷತೆಯನ್ನು ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಜಿಎಸ್ ಭಟ್ ವಹಿಸಲಿದ್ದಾರೆ. ಪ್ರಗತಿಪರ ಚಿಂತಕ ಸೀತಾರಾಮ ಕುರುವರಿ ಅವರು ಮಲೆನಾಡಿನ ಸಾಹಿತ್ಯದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.
ಮಧ್ಯಾಹ್ನ 1ಕ್ಕೆ ಗೋಷ್ಠಿ-2 ಆರಂಭಗೊಳ್ಳಲಿದೆ. ಇದರ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಂ.ರಾಘವೇಂದ್ರ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಎನ್ನುವ ಬಗ್ಗೆ ಚಿಂತಕ ದೇವೇಂದ್ರ ಬೇಳೆಯೂರು ಅವರು ವಿಷಯ ಮಂಡನೆ ಮಾಡಲಿದ್ದಾರೆ ಎಂಬುದಾಗಿ ಹೇಳಿದರು.
ಮಧ್ಯಾಹ್ನ 2.45ಕ್ಕೆ ಗೋಷ್ಠಿ-3 ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಕವಿ, ನಿವೃತ್ತ ಉಪ ನಿರ್ದೇಶಕರಾದಂತ ಡಾ.ಹಾ.ಉಮೇಶ್ ಅವರು ವಹಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಕವಿ ಕಲರವ ಎನ್ನುವ ವಿಷಯದ ಸಂಬಂಧ ಕವಿಗಳಾದಂತ ರಾಮಚಂದ್ರ ಸಾಗರ್, ಭಾಗೀರಥಿ, ಗಂಗಮ್ಮ, ಅಮಿತ್ ಆನಂದಪುರ, ಚಂದ್ರಪ್ಪ ಅಳೂರು, ಸ್ಟ್ಯಾನಿ ಲೋಪಿಸ್, ಭವ್ಯ, ರವಿರಾಜ್ ಸಾಗರ, ಸುಲೋಚನಾ, ಗೀತಾ ಸಾಗರ್, ವಾಣಿ ಗಣಪತಿ, ಡಾ.ವ.ಮ ಗಂಗಾಧರ್, ಧರ್ಮರಾಜ್ ಬೆಳಲಮಕ್ಕಿ ಹಾಗೂ ಎಂ ಈಶ್ವರಪ್ಪ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 4.30 ರಿಂದ 5.30ರವಗೆ ಗೋಷ್ಠಿ-4 ನಡೆಯಲಿದೆ. ಮಹಿಳೆ ಪ್ರಸ್ತುತ ಸಾಮಾಜಿಕ ಮನೋಭಾವ ಕುರಿತಂತೆ ರಂಗಕಲಾವಿದರಾದಂತ ವಿದ್ಯಾ ಹೆಗಡೆ ವಿಷಯ ಮಂಡನೆ ಮಾಡಲಿದ್ದಾರೆ. ಇದರ ಅಧ್ಯಕ್ಷತೆಯನ್ನು ವಕೀಲೆ ಜ್ಯೋತಿ ಕೋವಿ ವಹಿಸಲಿದ್ದಾರೆ ಎಂದಿದ್ದಾರೆ.
ಸಂಜೆ 5.30ಕ್ಕೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗೆ ಎಸ್ ಆರ್ ಭಟ್ ಭಡ್ತಿ, ಕರ್ಕಿಕೊಪ್ಪ, ಶ್ರಮಜೀವಿ ಕ್ಷೇತ್ರದಲ್ಲಿ ಸಾಗರದ ರೇವಣ ಸಿದ್ದಪ್ಪ ಸಿಎ, ಕೃಷಿ ಕ್ಷೇತ್ರದಲ್ಲಿ ಬಳಸಗೋಡು ಕುಮಾರ ಶೆಟ್ರು ಬಿಆರ್, ಸಮಾಜ ಸೇವೆ ಕ್ಷೇತ್ರದಲ್ಲಿ ಸಾಗರದ ಸುಭಾಷ್ ಕೌತಳ್ಳಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಂಡಗಳಲೆ ಮಹಾಬಲೇಶ್ವರ ಗೌಡ, ಕಲೆಯಲ್ಲಿ ಸೀತಾರಾಮ ಹಾರೆಗೊಪ್ಪ, ಸಾಗರದ ಯೋಧ ಸುಭಾಶ್ಚಂದ್ರ ತೇಜಸ್ವಿ, ಮಹಿಳಾ ಕ್ಷೇತ್ರದಲ್ಲಿ ಮರಿಯಾ ಲೀಮಾ, ಜಾನಪದ ಕ್ಷೇತ್ರದಲ್ಲಿ ಡಾ.ರಾಮಪ್ಪ ಕುಗ್ವೆ, ಸಹಕಾರ ಕ್ಷೇತ್ರದಲ್ಲಿ ಕೆ.ಸಿ ದೇವಪ್ಪ ಆವಿನಹಳ್ಳಿ, ಕ್ರೀಡಾ ಕ್ಷೇತ್ರದಲ್ಲಿ ಹೆಚ್.ಜಿ ಸುಬ್ರಹ್ಮಣ್ಯ ಭಟ್ ಹಾಗೂ ಪೌರಕಾರ್ಮಿಕರಾದಂತ ಪೊನ್ನಮ್ಮ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಲಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸ್ವಾಗತವನ್ನು ಲೋಕೇಶ್ ಕುಮಾರ್, ನಿರೂಪಣೆಯನ್ನು ಡಾ.ಅನ್ನಪೂರ್ಣ ಸಾಗರ, ನಿರ್ವಹಣೆಯನ್ನು ಜಿ.ನಾಗೇಶ್, ಪ್ರಸನ್ನ ಕೆಬಿ, ಗಿರೀಶ್ ರಾಯ್ಕರ್ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಅತಿಥಿಗಳಿಗೆ ಸತೀಶ್ ಆರ್ ವಂದಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ.7 ಗಂಟೆಗೆ ಸಾಗರ ತಾಲ್ಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದಂತ ವಿ.ಟಿ ಸ್ವಾಮಿಯಾದ ನಾನೇ ವಹಿಸಿರಲಿದ್ದೇನೆ. ಸಮಾರೋಪ ನುಡಿಯನ್ನು ಲೇಖಕ, ಕನ್ನಡ ಉಪನ್ಯಾಸಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ನುಡಿಯಲಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷರಿಗೆ ಮಾಜಿ ವಿಧಾನಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಹರತಾಳು ಹಾಲವ್ವ, ಮಾಜಿ ಪರಿಷತ್ ಸದಸ್ಯೆ ಪ್ರಫುಲ್ಲಾ ಮಧುಕರ್ ಅವರು ನೆರವೇರಿಸಲಿದ್ದಾರೆ. ಇದಾದ ಬಳಿಕ ವಿವಿಧ ಶಾಲಾ, ಕಾಲೇಜು ಹಾಗೂ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದಾವೆ. ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಸಾಹಿತ್ಯದ ರಸೌತಣ ಉಣಬಡಿಸಲಿದ್ದೇವೆ. ಸಾಗರ ತಾಲ್ಲೂಕಿನ ಸಾಹಿತ್ಯಾಸಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಅಧ್ಯಕ್ಷ ವಿ.ಟಿ ಸ್ವಾಮಿ ಮನವಿ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ
GOOD NEWS: ರಾಜ್ಯದ ‘ರೈತ’ರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಬೇಸಿಗೆಯಲ್ಲಿ ‘ಲೋಡ್ ಶೆಡ್ಡಿಂಗ್ ಇಲ್ಲ’