ಬೆಳಗಾವಿ : ಎಂತೆಂತ ಚಿಕ್ಕ ಪುಟ್ಟ ವಿಚಾಗಳಿಗೆ ಹಲ್ಲೆ ನಡೆಯುತ್ತೆ ನೋಡಿ, ಕೇವಲ ಮೊಬೈಲ್‌ನಲ್ಲಿರುವ ಸಿಮ್ ಕಾರ್ಡ್‌ಗಾಗಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಬೆಳಗಾವಿ ನಗರದ ಬೋಗಾರವೇಸ್‌ನಲ್ಲಿರುವ ಹನುಮಂತ ದೇವಸ್ಥಾನದ ಬಳಿ ನಡೆದಿದೆ.
ಹಲ್ಲೆ ಒಳಗಾದ ವ್ಯಕ್ತಿಯನ್ನು ಸುರೇಶ ವಾರಂಗ್ ಎಂದು ತಿಳಿದುಬಂದಿದೆ. ಹಲ್ಲೆ ಮಾಡಿದವರನ್ನು ನಿಖಿಲ್ ಕುರಣೆ ಎಂದು ತಿಳಿದುಬಂದಿದೆ. ಆರೋಪಿ ನಿಖಿಲ್ ಸುರೇಶ್ ಬಳಿ ಕರೆ ಮಾಡಿ ಕೊಡುತ್ತೇನೆ ಎಂದು ಫೋನ್ ತೆಗೆದುಕೊಂಡಿದ್ದಾನೆ. ಈ ವೇಳೆ ಮೊಬೈಲ್ ಕವರ್‌ನಲ್ಲಿಟ್ಟಿದ್ದ 4,000 ರೂ.ನಲ್ಲಿ 1500 ರೂ. ಹಣವನ್ನು ನಿಖಿಲ್ ಎಗರಿಸಿದ್ದಾನೆ. ಅಲ್ಲದೆ ಮೊಬೈಲ್‌ನಲ್ಲಿದ್ದ ಸಿಮ್‌ಕಾರ್ಡ್ ಸಹ ತೆಗೆದುಕೊಂಡಿದ್ದಾನೆ.
ಸಿಮ್‌ಕಾರ್ಡ್ ಮತ್ತು ಹಣ ವಾಪಸ್ ಕೇಳಲು ಹೋಗಿದ್ದಾಗ ನಿಖಿಲ್ ಮತ್ತು ಆತನ ಗ್ಯಾಂಗ್ ನನ್ನ ಮೇಲೆ ಹಲ್ಲೆ ಮಾಡಿದೆ ಎಂದು ಸುರೇಶ್ ವಾರಂಗ್ ಆರೋಪಿಸಿದ್ದಾರೆ.ಸುರೇಶ್ ತೊಡೆಯ ಭಾಗಕ್ಕೆ ತೀವ್ರವಾಗಿ ಹಲ್ಲೆಯಾಗಿದ್ದು, ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.