ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿದ್ದ ಕಳೆದ ಮಹಾಕುಂಭ ಮೇಳಕ್ಕೆ ಕಳೆದ ಶಿವರಾತ್ರಿಯಂದು ತೆರೆ ಬಿದ್ದಿತ್ತು. ಒಂದು ಕುಂಭ ಮೇಳಕ್ಕೆ ಕುಟುಂಬದ ಸಮೇತ ತೆರಳಿದ್ದ ಬೆಳಗಾವಿ ಮೂಲದ ವ್ಯಕ್ತಿ, ಕುಂಭಮೇಳ ಮುಗಿಸಿ ಮರಳುವಾಗ ಹೃದಯಾಘಾತವಾಗಿ ಸಾವನಪ್ಪಿದ್ದಾರೆ.
ಮೃತರನ್ನು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಕಿರಣ ನಿಪ್ಪಾಣಿಕರ (47) ಅವರು ಗುರುವಾರ ವಾರಾಣಸಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಇಂದು ಅವರ ಮೃತದೇಹವನ್ನು ಬೆಳಗಾವಿಗೆ ತರಲಾಗುವುದು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. ಕಿರಣ್ ಸಹೋದರಿ ಲಕ್ಷ್ಮೀ ನಿಪ್ಪಾಣಿಕರ ಅವರು ಮಹಾನಗರ ಪಾಲಿಕೆ ಉಪ ಆಯುಕ್ತರಾಗಿದ್ದಾರೆ.