ಮಹಾರಾಷ್ಟ್ರ : ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಕಂಡಕ್ಟರ್ ಮೇಲೆ ಮರಾಠಿ ಪ್ರಯಾಣಿಕರೊಂದಿಗೆ ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆದಿತ್ತು. ಘಟನೆ ಇದೀಗ ಎಷ್ಟರ ಮಟ್ಟಿಗೆ ತೀವ್ರತೆ ಆಗಿದೆ ಎಂದರೆ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಕರೆ ನೀಡಿದ್ದಾರೆ. ಇಷ್ಟಾದರೂ ಕೂಡ ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಮುಖಕ್ಕೆ ಮಸಿ ಬೆಳೆದು ಮರಾಠಿಗರು ಪುಂಡಾಟ ಮೆರೆದಿದ್ದಾರೆ.
ಹೌದು ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರ್ ಗೇಟ್ ಓವರ್ ಬ್ರಿಡ್ಜ್ ದಾಟುವ ಸಂದರ್ಭದಲ್ಲಿ ಆಳಂದ-ಸೋಲಾಪೂರ-ಪುಣೆ ಬಸ್ ಸೇರಿದಂತೆ ಬಸ್ ಚಾಲಕನ ಮುಖಕ್ಕೆ ಕೆಲ ಪುಂಡರು ಕಪ್ಪು ಮಸಿ ಬಳಿದು ಉದ್ದಟತನ ಮೆರೆದಿರುವ ಘಟನೆ ರಾತ್ರಿ ನಡೆದಿದೆ.ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಕಂಡಕ್ಟರ್ ಮೇಲೆ ಮರಾಠಿ ಪ್ರಯಾಣಿಕರೊಂದಿಗೆ ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆದಿತ್ತು.
ಆದರೆ ಇದೀಗ ಮತ್ತೆ ಕೆಲ ಪುಂಡರು ಕರ್ನಾಟಕದ ಬಸ್ಸುಗಳನ್ನು ಗುರಿಯಾಗಿಸಿ ಪುಣೆಯ ಸ್ವಾರ್ ಗೇಟ್ ಬ್ರಿಡ್ಜ್ ದಾಟುವಾಗ ಬಸ್ ಅನ್ನು ನಿಲ್ಲಿಸಿ, ಚಾಲಕನನ್ನು ಕೆಳಗೆ ಇಳಿಸಿ ಬಸ್ಸಿಗೆ ಹಾಗೂ ಡ್ರೈವರ್ ಮುಖಕ್ಕೆ ಕಪ್ಪು ಮಸಿ ಬಳಿದು ಬಸ್ಸಿನ ಮೇಲೆ ‘ಜೈ ಮಹಾರಾಷ್ಟ್ರ ‘ಜೈ ಮರಾಠಿ’ ಎಂದು ಬರೆದಿದ್ದಾರೆ.
ಅಲ್ಲದೇ ನೀವುಕರ್ನಾಟಕದವರು ಮರಾಠಿಗರನ್ನು ಕೆಣಕಬೇಡಿ, ನಾವು ಪುಂಡರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಹಾಗೂ ನಮ್ಮ ತಂಟೆಗೆ ಬರಬೇಡಿ, ನಮ್ಮವರಿಗೆ ಕರ್ನಾಟಕದಲ್ಲಿ ಏನಾದರೂ ಮಾಡಿದರೆ ನಿಮಗೆ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಚಾಲಕ ಸಾದೀಕ್ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.