ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟೆಕ್ಕಿ ಸುಮಾ ಮೃತದೇಹ ಪತ್ತೆಯಾಗಿದ್ದು, ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ ಮೃತ ದುರ್ದೈವಿ.
ಟೆಕ್ಕಿ ಸುಮಾ ಅವರು ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಿದ್ದರು. ಸಂಜೆ ಹೊತ್ತಿಗೆ ಕೆರೆ ಬಳಿ ಸುಮಾರ ಬ್ಯಾಗ್, ಮೊಬೈಲ್, ಬಸ್ ಟಿಕೆಟ್, ಚಪ್ಪಲಿ ಸಿಕ್ಕಿವೆ.ಇದರಿಂದ ಅನುಮಾನಗೊಂಡ ಸ್ಥಳೀಯರು ಸುಮಾರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಗುರುವಾರ ಸಂಜೆಯಿಂದ ಸುಮಾಗಾಗಿ ಕೆರೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಹುಡುಕಾಡಿದ್ದಾರೆ.ಆದರೆ ನಿನ್ನೆ ಸುಮಾ ಮೃತದೇಹ ಸಿಕ್ಕಿರಲಿಲ್ಲ. ಹಾಗಾಗಿ ಇಂದು ಮತ್ತೆ ಶೋಧಕಾರ್ಯಕ್ಕೆ ಇಳಿದರು.
ಅಗ್ನಿಶಾಮಕದಳ ಸಿಬ್ಬಂದಿಯೊಂಗೆ ಶಾಸಕ ರಂಗನಾಥ್ ಸಾಥ್ ನೀಡಿದ್ದು, ಖುದ್ದು ಶೋಧಕಾರ್ಯಕ್ಕೆ ಕೆರೆಗೆ ಇಳಿದರು.ನಿರಂತರ ಶೋಧಕಾರ್ಯ ಬಳಿಕ ಟೆಕ್ಕಿ ಸುಮಾರ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.