ರಾಯಚೂರು : ಕಿಡಿಗೇಡಿಗಳು ಸರ್ಕಾರಿ ಶಾಲೆಯ ಬಾಗಿಲ ಹಾಗೂ ಕೊಠಡಿಗಳಿಗೆ ಕುಂಕುಮ ಅರಿಶಿಣ ನಿಂಬೆಹಣ್ಣು ಹಚ್ಚಿ ಮಾಟ ಮಂತ್ರ ಮಾಡಿಸಿರುವ ಘಟನೆಯ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೊರವಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ಮಾನ್ವಿ ತಾಲೂಕಿನ ಕೊರವಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಮಾಟ ಮಂತ್ರ ಮಾಡಿಸಿದ ಕಿಡಿಗೇಡಿಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗೆ ಕಿಡಿಕೇಡಿಗಳು ಮಾಟ ಮಂತ್ರ ಮಾಡಿಸಿದ್ದಾರೆ. ರಾತ್ರಿ ವೇಳೆ ಗ್ರಾಮದ ಶಾಲೆಯ ಗೋಡೆ ಹಾಗೂ ಬಾಗಿಲಿಗೆ ಕುಂಕುಮ ಹಚ್ಚಿದ್ದು ಹರಿಶಿಣ ನಿಂಬೆಹಣ್ಣು ಮಂತ್ರಿಸಿ ಕಿಡಿಗೇಡಿಗಳು ಮಾಟ ಮಂತ್ರ ಮಾಡಿ ತೆರಳಿದ್ದಾರೆ.
ಇದೀಗ ಗ್ರಾಮದ ಸರ್ಕಾರಿ ಶಾಲೆಗೆ ವಾಮಾಚಾರ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಮಾಟ ಮಂತ್ರ ಮಾಡಿಸಿದ್ದರಿಂದ ಶಾಲೆಗೆ ಹೋಗಲು ಇದೀಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆದರುತ್ತಿದ್ದಾರೆ. ಮಾಟ ಮಂತ್ರ ಮಾಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.