ಕೊಪ್ಪಳ : ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ರೆಸಾರ್ಟ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನುಕೊಪ್ಪಳ ನಿವಾಸಿ ಶಾಮಿಯಾನ ಕೆಲಸ ಮಾಡುತ್ತಿದ್ದ ಹಳೇಬಂಡಿ ಹರ್ಲಾಪುರದ ವಸೀಮ್ (28) ಎಂದು ತಿಳಿದುಬಂದಿದೆ.
ಕಳೆದ ಬುಧವಾರ ವಸೀಂ ವೈಯಕ್ತಿಕ ಕೆಲಸಕ್ಕೆ ಪಟ್ಟಣಕ್ಕೆ ಆಗಮಿಸಿ ಕಲಕೇರಿ ರಸ್ತೆಯಲ್ಲಿನ ಜಂಗಲ್ ರೆಸಾರ್ಟ್ ನಲ್ಲಿ ರೂಂ ಪಡೆದ್ದಾನೆ. ಜೀವನದಲ್ಲಿ ಜಿಗುಪ್ಸೆ ಕಾರಣ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.