ನವದೆಹಲಿ : ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಅಲ್ಲಿ ಮೈಸೂರು ರಾಜಮನೆತನ ಸಲ್ಲಿಸಿದ ವಿಚಾರಣೆ ಇಂದು ನಡೆಯಿತು. ಅರ್ಜಿ ವಿಚಾರಣೆಯ ಬಳಿಕ ನ್ಯಾ.ಸುರೇಶ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಪೀಠವು ಒಂದು ವಾರದ ಒಳಗಾಗಿ ಟಿಡಿಆರ್ ತನ್ನ ಸುಪರ್ದಿಗೆ ನೀಡಬೇಕು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು.
ಈ ವೇಳೆ ನ್ಯಾಯಾಂಗ ನಿಂದನೆಯಿಂದ ಪಾರಾದ ರಾಜ್ಯ ಸರ್ಕಾರ. ಟಿಡಿಆರ್ ನೀಡಿದರೂ ಸಹ ಅದು ಬಳಕೆಯಾದಂತೆ ವಕೀಲರು ನೋಡಿಕೊಂಡಿದ್ದಾರೆ. ಟಿಡಿಆರ್ ಬಳಕೆಯಾದಂತೆ ಸರ್ಕಾರದ ಪರ ವಕೀಲರು ಇದೀಗ ನೋಡಿಕೊಂಡ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ ಮನೆತನದವರಿಗೆ ನೀಡಬೇಕಿದ್ದ ಟಿಡಿಆರ್ ಕೋರ್ಟಿಗೆ ಹಸ್ತಾಂತರವಾಗಿದ್ದು, ರಾಜಮನೆತನದವರಿಗೆ ನೀಡಬೇಕಿದ್ದ 3400 ಕೋಟಿಯ ಟಿಡಿಆರ್ ನ್ಯಾಯಾಲಯದ ಅಧಿಕಾರದಲ್ಲಿ ಟಿಡಿಆರ್ ಇರಲಿದೆ.
ಇದರಿಂದ ಟಿಡಿಆರ್ ಬಳಕೆ ಆಗಬಹುದು ಎನ್ನುವ ಆತಂಕದಿಂದ ಇದೀಗ ರಾಜ್ಯ ಸರ್ಕಾರಕ್ಕೆ ಮುಕ್ತಿ ದೊರೆತಿದೆ. ಇತ್ತ ಟಿಡಿಆರ್ ನೀಡಲು ನ್ಯಾಯಾಲಯ ಸೂಚಿಸಿತ್ತು. ಈಗ ಕೋರ್ಟಿಗೆ ಟಿಡಿಆರ್ ನೀಡುವ ಮೂಲಕ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆಯಿಂದಲೂ ಪಾರಾಗಿದೆ. ಬಾಕಿ ಉಳಿದ ಇನ್ನೊಂದು ಟಿಡಿಆರ್ ಜಮೀನು ಮಾಲೀಕರಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಟಿಡಿಆರ್ 49 ಕೋಟಿ ಜಮೀನು ಮಾಲೀಕರಿಗೆ ನೀಡಲು ರಾಜ್ಯ ಸರ್ಕಾರ ಇದೀಗ ಒಪ್ಪಿದೆ.ಹೀಗಾಗಿ ಟಿಡಿಆರ್ ಸಂಕಷ್ಟಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ.
ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರವಾಗಿ ದೆಹಲಿಯಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವುದು ನ್ಯಾಯಾಂಗ ನಿಂದನೆ ಕೇಸ್. ಇದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಇದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಕೂಡ ಕಾಪಾಡಬೇಕು. ಬಳಕೆಯಾಗದ ಭೂಮಿಗೆ ಟಿಡಿಆರ್ ಸಾಧ್ಯವಿಲ್ಲವೆಂದು ಸರ್ಕಾರ ಹೇಳಿಕೆ ನೀಡಿದೆ. ಇದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ಕುರಿತು ಕೋರ್ಟಲ್ಲಿ ವಾದ ಮಂಡಿಸಿದ್ದು, 1,270 ಚದರಕ್ಕೆ ಟಿಡಿಆರ್ ನೀಡಿದ್ದು, ಅದರ ಬಳಕೆ ಆಗದೆ ಇರುವ ಭೂಮಿಗೂ ಟಿಡಿಆರ್ ನೀಡಲು ಕೋರ್ಟ್ ಹೇಳಿಕೆ ನೀಡಿದೆ.
ಮುಂದಿನ ಆದೇಶಕ್ಕೆ ಬದ್ಧವಾಗಿ ಟಿಡಿಆರ್ ನೀಡುವುದಾಗಿ ಹೇಳಿದ್ದೇವೆ ಬಳಕೆಯಾಗದ ಭೂಮಿಗೆ ಟಿಡಿಆರ್ ನೀಡಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇವೆ. ಹೀಗಾಗಿ ಬಳಕೆಯಾದ ಭೂಮಿಗೆ ನೀಡುವ ಟಿ ಡಿ ಆರ್ ಕೋರ್ಟ್ ಗೆ ನೀಡುತ್ತೇವೆ. ಭೂಮಿ ಹಕ್ಕುದಾರರಿಗೆ ನೀಡಲು ನಾವು ನಿರಾಕರಿಸಿದ್ದೇವೆ ಮುಂದಿನ ವಿಚಾರಣೆಗೆ ಅಧಿಕಾರಿಗಳು ಕೋರ್ಟಿಗೆ ಹಾಜರಾಗಬೇಕಿಲ್ಲ ಎಂದು ದೆಹಲಿಯಲ್ಲಿ ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಹೇಳಿಕೆ ನೀಡಿದರು.