ನವದೆಹಲಿ : ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಮೈಸೂರು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು.ವಿಚಾರಣೆ ಬಳಿಕ ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ಒಂದು ವಾರಗಳಿಗೆ ಟಿಡಿಆರ್ ಪಾವತಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿತು
ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದರು. ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಬಳಕೆ ಮಾಡಿದ್ದಷ್ಟು ಭೂಮಿಗೆ ಟಿಡಿಆರ್ ನೀಡಲಾಗುತ್ತದೆ. ಉಳಿದ ಭೂಮಿಯನ್ನು ನಾವು ಬಳಕೆ ಮಾಡುತ್ತಿಲ್ಲ ಎಂದು ವಾದಿಸಿದರು.
ರಸ್ತೆ ಅಗಲೀಕರಣ ಪ್ರಸ್ತಾಪವನ್ನು ಕ್ಯಾಬಿನೆಟ್ ನಲ್ಲಿ ಕೈ ಬಿಡಲಾಗಿದೆ.ಈಗ ಬಳಸಿದ ಭೂಮಿಗೆ ಸುಮಾರು 45 ಕೋಟಿ ಆರ್ ನೀಡಬೇಕು. ಹಾಗಾಗಿ ನಾವು ಬಳಸಿದ ಜಮೀನಿಗೆ ಮಾತ್ರ ಟಿಡಿಆರ್ ನೀಡುತ್ತೇವೆ. ಇಲ್ಲದಿದ್ದರೆ 3400 ಕೋಟಿ ಟಿಡಿಆರ್ ನೀಡಬೇಕಾಗುತ್ತದೆ ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆ ಆಗುತ್ತದೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಬಳಿಕ ನ್ಯಾಯ ಪೀಠವು ಒಂದು ವಾರದೊಳಗೆ ಟಿಡಿಆರ್ ಪಾವತಿ ಮಾಡಬೇಕು. ನ್ಯಾಯಾಲಯದ ನೋಂದಣಿಯೊಂದಿಗೆ ಒಂದು ವಾರದಲ್ಲಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 10 ದಿನಗಳ ನಂತರ ವಿಚಾರಣೆಗೆ ದಿನಾಂಕ ನಿಗದಿ ಮಾಡಲು ಸೂಚನೆ ನೀಡಿತು. ಹಾಗಾಗಿ ರಾಜಮನೆತನ ಅರ್ಜಿಯ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು.